ಸುಳ್ಯ: ಬಾರ್ ವೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಘಟನೆ ಸುಳ್ಯದ ಜಟ್ಟಿ ಪಳ್ಳದಿಂದ ವರದಿಯಾಗಿದೆ. ಹೊಸ ವರ್ಷದ ಸಂಭ್ರಮದಲ್ಲಿದ್ದ ಬಾರ್ ಮಾಲೀಕರಿಗೆ ಭಾರಿ ಆಘಾತವಾಗಿದೆ.
ಏನಾಗಿತ್ತು?
ಜಟ್ಟಿಪಳ್ಳ ರಸ್ತೆಯಲ್ಲಿ ಕಾರ್ಯಚರಿಸುತ್ತಿರುವ ಹಿಲ್ ಸೈಡ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಜನವರಿ 1 ರಂದು ರಾತ್ರಿ 10.30 ರ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆಗೆ ಮಾಲೀಕರು ಸಂಸ್ಥೆಯನ್ನು ಬಂದು ಮಾಡಿ ಮನೆಗೆ ತೆರಳಿದ್ದರು. ಬಾರಿನಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಅಲ್ಲೇ ಪಕ್ಕದಲ್ಲಿ ಇರುವ ಕಟ್ಟಡದಲ್ಲಿ ತಂಗುತ್ತಿದ್ದು, ಅವರಲ್ಲಿ ಓರ್ವ 10:45ರ ವೇಳೆ ಬಾರಿನ ಹೊರಭಾಗದಲ್ಲಿ ನಿಂತು ಫೋನಿನಲ್ಲಿ ಮಾತನಾಡುತ್ತಿದ್ದ ಸಂದರ್ಭ ಒಳಭಾಗದಿಂದ ಬೆಂಕಿ ಕಂಡು ಬಂದಿರುವುದು ಗೊತ್ತಾಗಿದೆ. ತಕ್ಷಣ ಆತ ಇತರರಿಗೆ ಮಾಹಿತಿ ನೀಡಿದ್ದಾನೆ. ಎಲ್ಲರೂ ಸೇರಿಕೊಂಡು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಸಿ ಕ್ಯಾಮರಾ ಮಾನೀಟರ್, ಡಿವಿಆರ್, ಮದ್ಯದ ಬಾಟಲಿ ಜೋಡಿಸಿಟ್ಟಿದ್ದ ಸೆಲ್ಫ್ ಸೇರಿದಂತೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಸಾಮಗ್ರಿಗಳು ಸುಟ್ಟು ಕರಕಲಾಗಿದೆ ಎಂದು ಹೇಳಲಾಗಿದೆ.