ಕ್ರೈಂ

ಮೂವರು ಶಿಕ್ಷಕರಿಂದಲೇ 13 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್; ತಮಿಳುನಾಡಿನ ಕೃಷ್ಣಗಿರಿಯಲ್ಲಿ ಅಮಾನವೀಯ ಕೃತ್ಯ,ಕಾಮುಕ ಶಿಕ್ಷಕರ ಬಂಧನ

73
Spread the love

ನ್ಯೂಸ್‌ ನಾಟೌಟ್‌: ಶಿಕ್ಷಕರಿಗೆ ಯಾವತ್ತೂ ಗೌರವದ ಸ್ಥಾನ..ನಮ್ಮ ಜೀವನದಲ್ಲಿ ನಿರ್ದಿಷ್ಟ ಗುರಿ ಇಡಲು ಶಿಕ್ಷಕರು ತೋರಿಸುವ ಮಾರ್ಗ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಆದರೆ ಇಂತಹ ಶಿಕ್ಷಕರೇ ಮೃಗಗಳಾಗಿ ಬಿಟ್ಟರೆ ವಿದ್ಯಾರ್ಥಿಗಳ ಪಾಡೇನು? ಹೌದು,ತಮಿಳುನಾಡಿನಲ್ಲೊಂದು (Tamil Nadu)ಇಂತಹ ಅಮಾನವೀಕ ಕೃತ್ಯ ನಡೆದಿದೆ. 13 ವರ್ಷದ ವಿದ್ಯಾರ್ಥಿನಿ ಮೇಲೆ ಮೂವರು ಸರ್ಕಾರಿ ಶಾಲೆಯ ಶಿಕ್ಷಕರು ಸಾಮೂಹಿಕ ಅತ್ಯಾಚಾರ ಎಸಗಿದ್ದು, ಇದೀಗ ಅವರನ್ನು ಬಂಧಿಸಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿದೆ.

ಚಿನ್ನಸ್ವಾಮಿ, ಆರುಮುಗಂ ಹಾಗೂ ಪ್ರಕಾಶ್ ಬಂಧಿತ ಶಿಕ್ಷಕರು. ಕೆಲ ದಿನಗಳಿಂದ ವಿದ್ಯಾರ್ಥಿನಿ ಶಾಲೆಗೆ ಬಾರದೇ ಇರುವುದನ್ನು ಗಮನಿಸಿದ ಮುಖ್ಯಶಿಕ್ಷಕಿ ಆಕೆ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಸಂತ್ರಸ್ತೆಯ ಪೋಷಕರು, ಆಕೆ ಮೇಲೆ ಶಾಲೆಯಲ್ಲಿ ಮೂವರು ಶಿಕ್ಷಕರು ಅತ್ಯಾಚಾರವೆಸಗಿರುವ ಬಗ್ಗೆ ತಿಳಿಸಿದ್ದಾರೆ.ವಿಷಯ ತಿಳಿದ ಮುಖ್ಯಶಿಕ್ಷಕಿ ಜಿಲ್ಲಾ ಮಕ್ಕಳ ಸಹಾಯವಾಣಿಗೆ ದೂರು ನೀಡಿದ್ದಾರೆ. ದೂರಿನನ್ವಯ ಅಧಿಕಾರಿಗಳು ಸಂತ್ರಸ್ತ ಬಾಲಕಿಯ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿ ಬಳಿಕ ಕೃಷ್ಣಗಿರಿ ಜಿಲ್ಲೆಯ ಬಾರ್ಕೂರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಕಾಮುಕ ಮೂವರು ಶಿಕ್ಷಕರನ್ನ ಬಂಧಿಸಿದ್ದಾರೆ.

ಮೊದಲು ಒಬ್ಬ ಶಿಕ್ಷಕ ಸಂತ್ರಸ್ತೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ವಿಷಯದ ತಿಳಿದ ಇನ್ನುಳಿದ ಇಬ್ಬರು ಶಿಕ್ಷಕರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

See also  ಬಂಟ್ವಾಳ: ಮನೆಯ ಬೀಗ ಮುರಿದು ಚಿನ್ನ - ಹಣ ದೋಚಿದ ಕಳ್ಳರು..! ಪ್ರಕರಣ ದಾಖಲು
  Ad Widget   Ad Widget   Ad Widget   Ad Widget