ಕರಾವಳಿ

ನಗರ ಪಂಚಾಯತ್ ನಿಂದ ಕೆಸರು ಮಿಶ್ರಿತ ಕುಡಿಯುವ ನೀರು, ಸುಳ್ಯದ ಜನರ ಪರದಾಟ..!

521
Spread the love

ಸುಳ್ಯ: ಕುಡಿಯುವ ನೀರಿನೊಂದಿಗೆ ಕೆಸರು ಮಿಶ್ರಿತ ನೀರು ಸೇರಿಕೊಂಡು ಸುಳ್ಯ ನಗರದ ಜನರು ತೀವ್ರ ಸಮಸ್ಯೆ ಎದುರಿಸುತ್ತಿರುವ ಘಟನೆ ವರದಿಯಾಗಿದೆ. ಭಾರಿ ಮಳೆಗೆ ಕಲ್ಲುಮುಟ್ಲು ನೀರು ಸರಬರಾಜು ಕೇಂದ್ರದಲ್ಲಿ ಸಮಸ್ಯೆ ಎದುರಾಗಿದ್ದು ಸುಧಾರಿತ ಹೊಸ ತಂತ್ರಜ್ಞಾನದ ಶುದ್ಧೀಕರಣ ಘಟಕ ಇಲ್ಲದಿರುವುದೇ ಇಂತಹ ಅವ್ಯವಸ್ಥೆಗೆ ಕಾರಣ ಎನ್ನಲಾಗಿದೆ. ನೂತನ ಯಂತ್ರಕ್ಕೆ ಬೇಡಿಕೆ ಸಲ್ಲಿಸಲಾಗಿದ್ದರೂ ಇದುವರೆಗೆ ಬಂದಿಲ್ಲ. ಮುಂದೆ ಯಾವಾಗ ಬರುತ್ತದೆ ಅನ್ನುವುದೂ ಗೊತ್ತಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು ಈ ಕೂಡಲೇ ಸರಿಪಡಿಸಬೇಕೆಂದು ಅಧಿಕಾರಿಗಳನ್ನು ಸ್ಥಳೀಯರು ಒತ್ತಾಯಿಸಿದ್ದಾರೆ.

ಅಧಿಕಾರಿಗಳಿಗೆ ತರಾಟೆ

ವಿಚಾರ ತಿಳಿದ ತಕ್ಷಣ ಸುಳ್ಯ ನ್ಯಾಯಾಲಯದ ನ್ಯಾಯಾಧೀಶರುಗಳಾದ ಹಿರಿಯ ನ್ಯಾಯಾಧೀಶ ಸೋಮಶೇಖರ್, ಕಿರಿಯ ನ್ಯಾಯಾಧೀಶ ಯಶವಂತ್ ಕುಮಾರ್ ಕಲ್ಲುಮುಟ್ಲು ನೀರು ಸರಬರಾಜು ಕೇಂದ್ರಕ್ಕೆ ದಿಢೀರ್ ಭೇಟಿ ನಡೆಸಿದರು. ಸ್ಥಳಕ್ಕೆ ಅಧಿಕಾರಿಗಳನ್ನು ಕರೆಸಿ ಕೆಸರು ಮಿಶ್ರಿತ ನೀರು ಸರಬರಾಜಿನ ಕುರಿತು ಅಧಿಕಾರಿಗಳನ್ನು ತರಾಟೆಗೆ ತೀವ್ರ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ ಸುಳ್ಯ ನಗರ ಪಂಚಾಯತ್ ಇಂಜಿನಿಯರ್ ಶಿವಕುಮಾರ್ ರವರು ಕಳೆದ ಕೆಲವು ದಿನಗಳ ಹಿಂದೆ ಸುರಿಯುತ್ತಿರುವ ಭಾರಿ ಮಳೆಗೆ ಹೊಳೆಯ ನೀರು ಕೆಂಪು ಬಣ್ಣದಿಂದ ಕೂಡಿದ್ದು ನಗರದ ಕೆಲವು ಕಡೆ ನಲ್ಲಿಗಳಲ್ಲಿ ಈ ನೀರು ಬಂದಿರುತ್ತದೆ. ನೀರಿನ ಶುದ್ಧೀಕರಣದ ಘಟಕದ ಯಂತ್ರಗಳು ಹಳೆಯದಾಗಿದ್ದು, ನೂತನ ಯಂತ್ರಕ್ಕೆ ಸರಕಾರಕ್ಕೆ ಬೇಡಿಕೆ ಸಲ್ಲಿಸಿದ್ದೇವೆ. ಹಾಗು ನಮ್ಮ ಬೇಡಿಕೆಗೆ ಅನುಗುಣವಾಗಿ ನೀರಿನ ಶುದ್ಧೀಕರಣ ಘಟಕ ಕಡಿಮೆ ಇರುವ ಕಾರಣ ಈ ಸಮಸ್ಯೆ ಬಂದಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆ ಬಾರದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಿರಿಯ ನ್ಯಾಯಾಧೀಶ ಯಶವಂತ್ ಕುಮಾರ್, ಸಾರ್ವಜನಿಕರಿಗೆ ಕುಡಿಯುವ ನೀರು ಸರಿಯಾಗಿ ನೀಡಲು ಸಾಧ್ಯವಾಗದಿದ್ದರೆ ನೀವೇನು ಕೆಲಸ ಮಾಡುತ್ತಿದ್ದೀರಿ ಪ್ರಶ್ನಿಸಿದರು. ಹಿರಿಯ ನ್ಯಾಯಾಧೀಶ ಸೋಮಶೇಖರ್ ಮಾತನಾಡಿ ನೀವು ಅಧಿಕಾರಿಗಳು ಸಾರ್ವಜನಿಕರ ಸೇವೆಗಾಗಿ ಕೆಲಸ ನಿರ್ವಹಿಸುತ್ತಿದ್ದೀರಿ. ಆದ್ದರಿಂದ ಸುಳ್ಯದ ಬಡ ಜನತೆ ಇದೇ ನೀರನ್ನು ನಂಬಿಕೊಂಡು ಇರುವಾಗ ಅಂತವರಿಗೆ ಕುಡಿಯಲು ಶುದ್ದ ನೀರು ಕೊಡಬೇಕಾದ ಜವಾಬ್ದಾರಿ ಸ್ಥಳೀಯ ಪಂಚಾಯಿತಿ ನವರ ದಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಸುಳ್ಯ ನ್ಯಾಯಾಲಯದ ಎಪಿಪಿ ಜನಾರ್ಧನ್, ವಕೀಲರ ಸಂಘದ ಅಧ್ಯಕ್ಷ ಎಂ ವೆಂಕಪ್ಪ ಗೌಡ, ನಗರ ಪಂಚಾಯತಿ ಸದಸ್ಯ ಕೆಎಸ್ ಉಮ್ಮರ್, ಮುಖಂಡರುಗಳಾದ ಸುಂದರ ಪಾಠಜೆ, ಉನೈಸ್ ಪೆರಾಜೆ ಮೊದಲಾದವರು ಉಪಸ್ಥಿತರಿದ್ದರು.

See also  ಗುತ್ತಿಗಾರು: ಅಡಿಕೆ ರಾಶಿಯ ಬದಿಯಲ್ಲಿ ಬೆಂಕಿಯಲ್ಲಿ ಅರೆಬೆಂದ ಮೃತದೇಹ ಪತ್ತೆ, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ..? ಏನಿದು ದುರ್ಘಟನೆ..?
  Ad Widget   Ad Widget   Ad Widget   Ad Widget   Ad Widget   Ad Widget