ಕ್ರೈಂ

ಐವರ್ನಾಡು: ನಾಪತ್ತೆಯಾಗಿದ್ದ ಯುವಕನ ಮೃತ ದೇಹ ಬಾವಿಯಲ್ಲಿ ಪತ್ತೆ

686

ಸುಳ್ಯ: ಐವರ್ನಾಡಿನ ಬಾಂಜಿಕೋಡಿಯಲ್ಲಿ ಇಂದು ಬೆಳಗ್ಗೆ ಬಾವಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಬಾಂಚಿಕೋಡಿ ದಿವಂಗತ ಮಾಧವ ಅವರ ಪುತ್ರ ಅರುಣ್‌ ಕುಮಾರ್ ಎಂದು ಗುರುತಿಸಲಾಗಿದೆ.

ಅರುಣ್‌ ಕುಮಾರ್ ಡಿಸೆಂಬರ್ ೩೧ರಿಂದ ಮನೆಯಿಂದ ಕಾಣೆಯಾಗಿದ್ದರು. ಇವರನ್ನು ಕುಟುಂಬಸ್ಥರು ಕಳೆದ ಎರಡು ದಿನಗಳಿಂದ ಹಗಲಿರುಳೆನ್ನದೆ ತೀವ್ರ ಹುಡುಕಾಟ ನಡೆಸಿದ್ದರು. ಆದರೆ ಇಂದು ಬೆಳಗ್ಗೆ ರವಿಕುಮಾರ್ ರವರ ಮನೆಯ ಮುಂಭಾಗದಲ್ಲಿರುವ ಬಾವಿಯಲ್ಲಿ ಇವರ ಮೃತದೇಹ ಕುಟುಂಬಸ್ಥರಿಗೆ ಒಬ್ಬರಿಗೆ ಕಂಡಿರುತ್ತದೆ. ಅರುಣ್ ಕುಮಾರ್ ರವರು ಉಪ್ಪಿನಂಗಡಿಯಲ್ಲಿ ಫ್ಯಾಕ್ಟರಿಯೊಂದರಲ್ಲಿ ಮಾಸ್ಟರ್ ಪ್ಲಾನ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಮೃತ ಅರುಣ್ ಕುಮಾರ್ ತಾಯಿ ವಿಮಲಾ, ಪತ್ನಿ ವನಜ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

See also  ಮೃತದೇಹಗಳಿರುವ 45 ಚೀಲಗಳು ಪತ್ತೆ..! ಪೊಲೀಸರಿಗೆ ಕಾದಿತ್ತು ಅಚ್ಚರಿ!
  Ad Widget   Ad Widget   Ad Widget   Ad Widget   Ad Widget   Ad Widget   Ad Widget