ಕ್ರೈಂ

ಟೆಕ್ಕಿ ಮನೆಯಲ್ಲಿ ಕೆಲಸಕ್ಕಿದ್ದ ಹದಿ ಹರೆಯದ ಯುವತಿ ಶವ ಬಾತ್ ರೂಂನಲ್ಲಿ ಪತ್ತೆ

757

ಬೆಂಗಳೂರು: ಉದ್ಯಾನನಗರಿಯ ಸಾಫ್ಟ್ ವೇರ್ ಕಂಪನಿ ಉದ್ಯೋಗಿಯೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದ ಯುವತಿಯ ಶವವು ಸ್ನಾನದ ಕೋಣೆಯಲ್ಲಿ ಪತ್ತೆಯಾಗಿದೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತಮಿಳುನಾಡು ಮೂಲದ ಕವಿತಾ (19) ಮೃತ ಯುವತಿ. ಆಕೆ ವಿವೇಕ್ ಎಂಬುವರ ಬೆಳ್ಳಂದೂರಿನ ಮನೆಯಲ್ಲಿ ಮಗು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಳು. ಶನಿವಾರ ಬೆಳಿಗ್ಗೆ ಸ್ನಾನದ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಈ ಕುರಿತು ಯುವತಿಯ ತಾಯಿ ದೂರು ನೀಡಿದ್ದಾರೆ. ಅದರ ಆಧಾರದಲ್ಲಿ ಅನುಮಾನಾಸ್ಪದ ಸಾವು ‍ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

See also  ಡ್ಯೂಟಿ ಬದಲಿಸಿದ್ದಕ್ಕೆ ಠಾಣೆಯಲ್ಲಿ ಆತ್ಮಹತ್ಯೆಯ ನಾಟಕವಾಡಿದ ಪೋಲಿಸ್ ಪೇದೆ..! ಈ ಬಗ್ಗೆ ವೈದ್ಯರು ಹೇಳಿದ್ದೇನು..?
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget