ಕ್ರೈಂರಾಜ್ಯ

ಡಿ.ರೂಪಾ ಮತ್ತು ರೋಹಿಣಿ ಸಿಂಧೂರಿ ನಡುವಿನ ಪ್ರಕರಣದಲ್ಲಿ “ಒನ್‌ ಮಿನಿಟ್‌ ಅಪಾಲಜಿ’ ಪುಸ್ತಕ ಓದಲು ಹೇಳಿದ ಕೋರ್ಟ್..! ಕುಟುಂಬದೊಂದಿಗೆ ಹಾಜರಾಗಿದ್ದ IAS, IPS ಅಧಿಕಾರಿಗಳು..!

330
Spread the love

ನ್ಯೂಸ್ ನಾಟೌಟ್: ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌ ವಿರುದ್ಧ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ದಾಖಲಿಸಿರುವ ಮಾನನಷ್ಟ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ 5ನೇ ಸಿಸಿಎಚ್‌ ನ್ಯಾಯಾಲಯ, ಇಬ್ಬರು ಅಧಿಕಾರಿಗಳಿಗೂ “ಒನ್‌ ಮಿನಿಟ್‌ ಅಪಾಲಜಿ’ ಪುಸ್ತಕ ಓದುವಂತೆ ಸಲಹೆ ನೀಡಿದೆ. ಬಳಿಕ ವಿಚಾರಣೆಯನ್ನು ಫೆ. 12ಕ್ಕೆ ಮುಂದೂಡಿದೆ.

ಪ್ರಕರಣ ಸಂಬಂಧ ಬುಧವಾರ(ಫೆ.06) ಸಂಜೆ ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌, ಪತಿ, ಐಎಎಸ್‌ ಅಧಿಕಾರಿ ಮನೀಷ್‌ ಮೌದ್ಗಿಲ್‌, ರೋಹಿಣಿ ಸಿಂಧೂರಿ ಹಾಗೂ ಅವರ ಪತಿ ಕೂಡ ಖುದ್ದು ಕೋರ್ಟ್‌ಗೆ ಹಾಜರಾದರು. ಆಬಳಿಕ ನ್ಯಾಯಾಧೀಶರಾದ ವಿಜಯ್‌ ಕುಮಾರ್‌ ಜಾಟ್ಲಾ , ರೂಪಾ ಮತ್ತು ರೋಹಿಣಿ, ಅವರ ಪರ ವಕೀಲರು ಹೊರತುಪಡಿಸಿ ಇತರ ಎಲ್ಲರನ್ನು ಕೋರ್ಟ್‌ ಹಾಲ್‌ ನಿಂದ ಹೊರಗಡೆ ಕಳುಹಿಸಿದರು.

ಬಳಿಕ ರೋಹಿಣಿ ಸಿಂಧೂರಿ ಇನ್‌ ಕ್ಯಾಮರಾ ಪ್ರೊಸಿಡಿಂಗ್‌ ವಿಚಾರಣೆಗೆ ಅವಕಾಶ ನೀಡಬೇಕೆಂದು ಕೋರಿದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೂಪಾ, ಸುಪ್ರೀಂ ಕೋರ್ಟ್‌ನಲ್ಲಿ ಇನ್‌ ಕ್ಯಾಮರಾ ಪ್ರೊಸಿಡಿಂಗ್‌ ನಿರಾಕರಿಸಿದವರು.

ಆಬಳಿಕ ನ್ಯಾಯಾಧೀಶರಾದ ವಿಜಯ್‌ ಕುಮಾರ್‌ ಚಾಟ್ಲಾ, ಇಬ್ಬರೂ ಉತ್ತಮ ಹೆಸರು ಗಳಿಸಿದ ಹಿರಿಯ ಅಧಿಕಾರಿಗಳಾಗಿದ್ದೀರಿ. ನಿಮ್ಮ ಸಮಯ ಸಮಾಜಕ್ಕಾಗಿ ಮೀಸಲಿಡಬೇಕು. ಕೋರ್ಟ್‌ ಕಲಾಪದಲ್ಲಿ ಸಮಯ ವ್ಯಯಿಸುವ ಬದಲು ರಾಜಿ ಸಾಧ್ಯವೇ ಯೋಚಿಸಿ. ಅಲ್ಲದೇ ಇಬ್ಬರು ಅಧಿಕಾರಿಗಳಿಗೆ ಒನ್‌ ಮಿನಿಟ್‌ ಅಪಾಲಜಿ ಪುಸ್ತಕ ಓದುವಂತೆ ಸಲಹೆ ನೀಡಿ ಮುಂದಿನ ವಿಚಾರಣೆಯನ್ನು ಫೆ. 12ಕ್ಕೆ ಮುಂದೂಡಿದರು ಎಂದು ವರದಿ ತಿಳಿಸಿದೆ.

See also  ಪುತ್ತೂರು: ಜೂಜಾಟ ಅಡ್ಡೆ ಮೇಲೆ ದಾಳಿ! ಆರೋಪಿಗಳ ಬಂಧನ!
  Ad Widget   Ad Widget   Ad Widget   Ad Widget