ಕ್ರೀಡೆ/ಸಿನಿಮಾ

ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ ಪಿಗ್ಗಿ,ತಂದೆಯಂತೆಯೇ ಮಗಳು ಎಂದ ನೆಟ್ಟಿಗರು

ನ್ಯೂಸ್ ನಾಟೌಟ್ : ಸೆಲೆಬ್ರಿಟಿಗಳು ತಮ್ಮ ಮಗುವಿನ ಮುಖವನ್ನು ರಿವಿಲ್ ಮಾಡಲು ಹೋಗುವುದಿಲ್ಲ.ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲೇ ಬೇಕಾಗುತ್ತದೆ.ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಖ್ಯಾತ ಗಾಯಕ ನಿಕ್ ಜೋನಾಸ್ ದಂಪತಿಯೂ ತಮ್ಮ ಮಗಳ ಮುಖವನ್ನು ತೋರಿಸಿರಲಿಲ್ಲ.ಆದರೆ ಇದೀಗ ಮೊದಲ ಬಾರಿಗೆ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಮುಖವನ್ನು ರಿವೀಲ್ ಮಾಡಿದ್ದಾರೆ.

ನಿಕ್ ಜೋನಾಸ್ ಸಹೋದರರು ಲಾಸ್ ಎಂಜಲೀಸ್ ನ ಹಾಲಿವುಡ್ ವಾಕ್ ಆಫ್ ಫೇಮ್ ಸ್ಟಾರ್ಸ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಪಿಂಕಿ ತಮ್ಮ ಮಗಳ ಮುಖವನ್ನು ಮೊದಲ ಬಾರಿಗೆ ರಿವೀಲ್ ಮಾಡಿದ್ದಾರೆ.ಕಾರ್ಯಕ್ರಮದಲ್ಲಿ ಪತಿ ನಿಕ್ ಜೋನಾಸ್‌ ಮತ್ತು ಸಹೋದರರ ಜೊತೆ ಪಿಗ್ಗಿ ರೆಡ್‌ ಕಾರ್ಪೆಟ್ ವಾಕ್ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಮೊದಲ ಸಾಲಿನಲ್ಲಿ ಕಾಣಿಸಿಕೊಂಡಿದ್ದು ಮಡಿಲಿನಲ್ಲಿ ಮಗಳಿದ್ದಳು. ಕ್ರೀಮ್‌ ಬಣ್ಣದ ಔಟ್‌ ಫಿಟ್‌ಗೆ ಮ್ಯಾಚ್ ಆಗುವ ಹೇರ್‌ಬ್ಯಾಂಡ್‌ನಲ್ಲಿ ಮಾಲ್ತಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಸಣ್ಣ ಕಿವಿ ಓಲೆ ನೆಟ್ಟಿಗರ ಗಮನ ಸೆಳೆದಿದೆ.

 ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆ ಪ್ರಿಯಾಂಕಾ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಮಗಳ ಮುಖವನ್ನು ಸ್ಪಷ್ಟವಾಗಿ ರಿವೀಲ್ ಮಾಡಿದ್ದಾರೆ. ಪಿಂಕಿ ಮಗಳ ಮುಖ ನೋಡುತ್ತಿದ್ದಂತೆ ನೆಟ್ಟಿಗರು ಶುಭಾಶಯಗಳ ಸುರಿಮಳೆಗೈದಿದ್ದಾರೆ.ಕೆಲವರು ನೋಡೋದಕ್ಕೆ ಅಪ್ಪನ ಹಾಗೆ ಎಂದು ಪಿಂಕಿಯ ಕಾಲೆಳೆದಿದ್ದಾರೆ.

Related posts

ಚೆನ್ನಾಗಿ ನಟನೆ ಮಾಡ್ತಿದ್ದೀರಾ ಮುಂದುವರೆಸಿ …

42ನೇ ವಯಸ್ಸಿನಲ್ಲಿ 6 ವರ್ಷ ಸಣ್ಣವನ ಜೊತೆ 3ನೇ ಮದುವೆಯಾದ ನಟಿ ..! ಇಲ್ಲಿದೆ ಸಂಪೂರ್ಣ ಮಾಹಿತಿ

ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಪಿ.ವಿ.ಸಿಂಧು ಪ್ರಧಾನಿ ಮೋದಿಗೆ ಸವಿಯಲು ಮಂಗಳೂರು ಐಸ್ ಕ್ರೀಂ?