ಕ್ರೀಡೆ/ಸಿನಿಮಾ

ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಪಿ.ವಿ.ಸಿಂಧು ಪ್ರಧಾನಿ ಮೋದಿಗೆ ಸವಿಯಲು ಮಂಗಳೂರು ಐಸ್ ಕ್ರೀಂ?

ಮಂಗಳೂರು: ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದು ಬನ್ನಿ ಇಬ್ಬರು ಒಟ್ಟಿಗೆ ಐಸ್‌ ಕ್ರೀಂ ತಿನ್ನೋಣ ಎಂದು ಬ್ಯಾಡ್ಮಿಂಟನ್ ತಾರೆ ಪಿ,ವಿ.ಸಿಂಧುಗೆ ಪ್ರಧಾನಿ ಮೋದಿ ಮಾತುಕೊಟ್ಟಿದ್ದರು. ಮೋದಿ ಇರಿಸಿದ ವಿಶ್ವಾಸವನ್ನು ಸಿಂಧು ನಿಜವಾಗಿಸಿದ್ದಾರೆ. ಕಂಚಿನ ಪದಕದೊಂದಿಗೆ ದೇಶಕ್ಕೆ ವಾಪಸ್ ಆಗಿದ್ದಾರೆ. ಇದೀಗ ಮೋದಿ ಪದಕ ವಿಜೇತೆ ಸಿಂಧು ಜತೆಗೆ ಕೊಟ್ಟ ಮಾತಿನಂತೆ ಐಸ್‌ ಕ್ರೀಂ ತಿನ್ನಬೇಕಿದೆ. ಈ ಐಸ್‌ ಕ್ರೀಂ ಅನ್ನು ನಾವು ಸರಬರಾಜು ಮಾಡುವುದಾಗಿ ಮಂಗಳೂರಿನ ಪಬ್ಬಾಸ್ ಐಸ್‌ ಕ್ರೀಂ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಫರ್ ನೀಡಿದೆ.  ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಜೊತೆ ಐಸ್ ಕ್ರೀಂ ತಿನ್ನಲು ದಿ ಬೆಸ್ಟ್ ಐಸ್ ಕ್ರೀಂ ನೀಡುವುದಾಗಿ ಮೋದಿಯವರಿಗೆ ಪಬ್ಬಾಸ್ ಟ್ವಿಟ್ ಮಾಡಿದೆ.

Related posts

ಸೆಲ್ಫಿ ಕೇಳಿ ನಟಿಯ ಸೊಂಟ ಮುಟ್ಟಿದ ವ್ಯಕ್ತಿ..! ಇಲ್ಲಿದೆ ನಟಿ ಕಾಜಲ್ ವೈರಲ್‌ ವಿಡಿಯೊ..!

ಟೀಂ ಇಂಡಿಯಾ ಅಭಿಮಾನಿಗಳ ಕ್ಷಮೆಯಾಚಿಸಿದ್ದೇಕೆ ಡೇವಿಡ್‌ ವಾರ್ನರ್‌..? ಆತ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡದ್ದೇನು?

ನಟ ಚೇತನ್‌ ಅಹಿಂಸಾ ಬಂಧನ