ಕರಾವಳಿ

ಬಿಳಿ ಪಂಚೆ-ಶರ್ಟ್ ಧರಿಸಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಅಕ್ಷರ ಸಂತ ಹರೇಕಳ ಹಾಜಬ್ಬ

ನವದೆಹಲಿ :  ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ರಾಷ್ಟ್ರಪತಿ ರಾಮನಾಥ್ ಗೋವಿಂದ್ ಅವರು ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಇಂದು ಪ್ರದಾನ ಮಾಡಿದರು.

ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಚಿವ ಸಂಪುಟದ ಹಿರಿಯ ಸಹೋದ್ಯೋಗಿಗಳು ಉಪಸ್ಥಿತರಿದ್ದರು. ಹಾಜಬ್ಬ ಅವರು ಭಾನುವಾರ ದೆಹಲಿ ಪ್ರಯಾಣ ನಡೆಸಿದ್ದರು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರು ಸ್ಪೈಸ್ ಜೆಟ್ ವಿಮಾನದಲ್ಲಿ ಮುಂಬಯಿ ಮೂಲಕ ಅವರು ದೇಶದ ರಾಜಧಾನಿ ತಲುಪಿದ್ದರು. ಎಂದಿನಂತೆ ಮೊಣ ಕಾಲಿನಿಂದ ಮೇಲೆ ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಕೈಯಲ್ಲೊಂದು ಕಪ್ಪು ಬ್ಯಾಗ್ ಹಿಡಿದುಕೊಂಡು ಅವರು ವಿಮಾನ ಏರಿದರು. ಇದೀಗ ರಾಷ್ಟ್ರಪತಿಭವನಕ್ಕೂ ಅದೇ ರೀತಿಯ ಮಾಸಿದ ಬಿಳಿ ಪಂಚೆ ಮತ್ತೆ ಬಿಳಿ ಶರ್ಟ್ ತೊಟ್ಟು ಕೈಲ್ಲಿ ಪ್ಲಾಸ್ಟಿಕ್ ಬ್ಯಾಗ್ ಹಿಡಿದುಕೊಂಡು ತೆರಳಿದ್ದರು.

Related posts

ಗುತ್ತಿಗೆದಾರರಿಂದ ಹಣ ಪಡೆದಿಲ್ಲ ಎಂದದ್ದೇಕೆ ಶೋಭಾ ಕರಂದ್ಲಾಜೆ..? ಗೋಬ್ಯಾಕ್ ಶೋಭಾ ಅಭಿಯಾನ..!

ಉಡುಪಿ:ಒಂದು ವಾರಗಳ ಕಾಲ ವಾಹನ ಚಾಲಕರಿಗೆ ಚಹಾ ಸಿಹಿತಿಂಡಿ ವಿತರಿಸಲಿರುವ ಪೊಲೀಸರು! ವಿಭಿನ್ನ ರೀತಿಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ

ಜೇಸಿ ಸಪ್ತಾಹ ಸಂಭ್ರಮ ಹಿನ್ನೆಲೆ, ಸುಳ್ಯಕ್ಕೆ ಜೇಸಿಐ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ ಭೇಟಿ