ಕರಾವಳಿ

ಜೇಸಿ ಸಪ್ತಾಹ ಸಂಭ್ರಮ ಹಿನ್ನೆಲೆ, ಸುಳ್ಯಕ್ಕೆ ಜೇಸಿಐ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ ಭೇಟಿ

600
Spread the love

ಸುಳ್ಯ: ಜೇಸಿ ಸಪ್ತಾಹ ಆಚರಿಸಿಕೊಳ್ಳುತ್ತಿರುವ ಜೇಸಿಐ ಸುಳ್ಯ ಸಿಟಿಗೆ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆಯವರು ಶುಕ್ರವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸುಳ್ಯದ ರಂಗಮಯೂರಿ ಕಲಾ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೂತ್ ಇನ್‌ಸ್ಪೈಯರ್ ಪ್ರಶಸ್ತಿ ಪ್ರದಾನ ಕೂಡ ಮಾಡಲಾಯಿತು. ಇದಕ್ಕೂ ಮೊದಲು ವಲಯಾಧ್ಯಕ್ಷರನ್ನು ನಾಸಿಕ್ ಬ್ಯಾಂಡ್ ಮೂಲಕ ಮುಖ್ಯ ರಸ್ತೆಯಿಂದ ಕಾರ್ಯಕ್ರಮದ ಸ್ಥಳಕ್ಕೆ ಬರಮಾಡಿಕೊಳ್ಳಲಾಯಿತು. ಜೇಸಿಐ ಸುಳ್ಯ ಸಿಟಿ ವತಿಯಿಂದ ವಲಯಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಜೇಸಿ ಘಟಕದ ಅಧ್ಯಕ್ಷ ಚಂದ್ರಶೇಖರ ಕನಕಮಜಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಲಯ ಉಪಾಧ್ಯಕ್ಷೆ ಶ್ರೀಮತಿ ಹೇಮಲತಾ ಪ್ರದೀಪ್ ಮತ್ತು ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ದೀಪಕ್ ಗಂಗೂಲಿ ಅತಿಥಿಗಳಾಗಿ ಆಗಮಿಸಿದ್ದರು. ವಲಯ ಸಂಯೋಜಕರಾದ ಸುರೇಶ್ ನಾಯಕ್, ನಿಕಟ ಪೂರ್ವಾಧ್ಯಕ್ಷ ವಿನಯರಾಜ್ ಮಡ್ತಿಲ, ಜೇಸಿರೆಟ್ ಅಧ್ಯಕ್ಷೆ ನಯನ ಮುಡೂರು, ಘಟಕ ಕಾರ್ಯದರ್ಶಿ ಆಶ್ವಥ್ ಅಡ್ಕಾರ್, ಯುವ ಜೇಸೀ ಅಧ್ಯಕ್ಷ ಪ್ರಜ್ವಲ್, ಸುದ್ದಿ ಚಾನೆಲ್‌ ವೆಬ್‌ ಸೈಟ್ ಮುಖ್ಯಸ್ಥ ದುರ್ಗಾ ಕುಮಾರ್ ನಾಯರ್ ಕೆರೆ , ಲೋಕೇಶ್ ಊರುಬೈಲ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

See also  ಮಂಗಳೂರು: ಬಾವುಟಗುಡ್ಡೆಯಲ್ಲಿ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಪುಷ್ಪ ನಮನ, ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ ಸಂಸ್ಮರಣಾ ಕಾರ್ಯಕ್ರಮ
  Ad Widget   Ad Widget   Ad Widget   Ad Widget   Ad Widget   Ad Widget