ಕ್ರೀಡೆ/ಸಿನಿಮಾ

ಆರ್‌ಸಿಬಿ ತಂಡದ ಹೊಸ ನಾಯಕತ್ವಕ್ಕೆ ಇಬ್ಬರು ಕ್ರಿಕೆಟಿಗರ ಹೆಸರು

18

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2021ರ (IPL 2021) ಮಧ್ಯೆ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರುತಂಡದ ನಾಯಕನಾಗಿ ಇದೇ ನನ್ನ ಕೊನೇ ಟೂರ್ನಿ ಎಂದಾಗ ಎಲ್ಲರಿಗೂ ಆಘಾತವಾಗಿತ್ತು. ಇದರ ಬೆನ್ನಲ್ಲೇ ಕೊಹ್ಲಿ ನಂತರದ ಆರ್​ಸಿಬಿ ನಾಯಕನ ಪಟ್ಟ ಯಾರಿಗೆ ಎಂಬ ಬಗ್ಗೆಯೂ ಜೋರಾಗಿ ಚರ್ಚೆ ಶುರುವಾಗಿತ್ತು. ಎಬಿ ಡಿವಿಲಿಯರ್ಸ್​ , ಗ್ಲೆನ್ ಮ್ಯಾಕ್ಸ್ ವೆಲ್, ಡೇವಿಡ್ ವಾರ್ನರ್ ಹೀಗೆ ಕೆಲವು ಆಟಗಾರರ ಹೆಸರು ಕೇಳಿ ಬಂದಿದ್ದವು. ಇದರ ನಡುವೆ ಕನ್ನಡಿಗರಾದ ಕೆಎಲ್ ರಾಹುಲ್ ಆರ್​ಸಿಬಿ ಸೇರಿ ನಾಯಕನಾಗಲಿದ್ದಾರೆ ಎಂಬ ಮಾತು ಕೂಡ ಹರಿದಾಡಿದ್ದವು. ಸದ್ಯ ಈ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲು ಆರ್​ಸಿಬಿ ಫ್ರಾಂಚೈಸಿ ತಯಾರಾಗಿದೆ.

ಹೌದು, ವರದಿಯ ಪ್ರಕಾರ ಸದ್ಯದಲ್ಲೇ ಆರ್​ಸಿಬಿ ಫ್ರಾಂಚೈಸಿ ಹೊಸ ನಾಯಕನ ಹೆಸರು ಘೋಷಣೆ ಮಾಡಲಿದೆಯಂತೆ. ಇದಕ್ಕಾಗಿ ಇಬ್ಬರು ಆಟಗಾರರ ಹೆಸರನ್ನು ಕೂಡ ಶಾರ್ಟ್​ ಲಿಸ್ಟ್ ಮಾಡಿದೆಯಂತೆ. ಅವರೇ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್. ಈಗಾಗಲೇ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಅಯ್ಯರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆಯಲಿದ್ದಾರೆ. ರಾಹುಲ್ ಕೂಡ ಪಂಜಾಬ್ ತಂಡ ಬಿಟ್ಟು ಮೆಗಾ ಆಕ್ಷನ್​ಗೆ ಲಭ್ಯರಿದ್ದಾರೆ ಎಂದು ಹೇಳಲಾಗಿದೆ. ಹೀಗಿರುವಾಗ ಆರ್​ಸಿಬಿ ಇವರಿಬ್ಬರ ಪೈಕಿ ಒಬ್ಬರನ್ನು ಖರೀದಿಸಿ ನಾಯಕನ ಪಟ್ಟ ನೀಡಲಿದೆಯಂತೆ.