ಕರಾವಳಿಸುಳ್ಯ

ಗುತ್ತಿಗಾರು:ಅಮರ ಯೋಗ ತರಬೇತಿ ಕೇಂದ್ರ ವಿದ್ಯಾರ್ಥಿಗಳಿಗೆ ‘ಯೋಗ ಕಲಾ ನಿಧಿ ಪ್ರಶಸ್ತಿ’ ಗರಿ

ನ್ಯೂಸ್ ನಾಟೌಟ್ : ಪ್ರತಿಷ್ಠಿತ ಪತಂಜಲಿ ಯೋಗ ತರಬೇತಿ ಕೇಂದ್ರ ಬೆಂಗಳೂರು ಇವರು ನಡೆಸಿದ ಯೋಗೋತ್ಸವ 2022 ಇದರಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಯೋಗ ಕಲಾನಿಧಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪತಂಜಲಿ ಯೋಗ ತರಬೇತಿ ಕೇಂದ್ರದ ವತಿಯಿಂದ ನೀಡಿದ ಪ್ರಶಸ್ತಿ ಪತ್ರ ಮತ್ತು ಶಾಶ್ವತ ಫಲಕವನ್ನು ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರು ಇಲ್ಲಿ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಹರಿಹರೇಶ್ವರ ದೇವಸ್ಥಾನ ಇದರ ಅಧ್ಯಕ್ಷ ಕಿಶೋರ್ ಕುಮಾರ್ ಕುಜುಗೋಡು, ನಿವೃತ್ತ ಸೈನಿಕ ಮಹೇಶ್ ಕೊಪ್ಪತಡ್ಕ,ಡಾ. ರಾಜೇಶ್ವರಿ ಗೌತಮ್ ಮೇರ್ಕಜೆ ಮನೆ, ದಿವ್ಯ ಲಕ್ಷ್ಮಣ ಗೌಡ ದೇವಸ್ಯ ಅವರು ಹಾಗೂ ಅರುಣ್ ಮೇಕೇರಿ, ತುಳಸಿ ಕುಮಾರ್ ಕೊರ್ತ್ಯಡ್ಕ, ಚಂದ್ರಶೇಖರ ಕೋಡೊಂಬು, ಭವಿತ ಕೋಡೊಂಬು,ಪ್ರಶಾಂತ್ ವಾಲ್ತಾಜೆ, ಯೋಗ ಗುರು ಶರತ್ ಮರ್ಗಿಲಡ್ಕ, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಟ್ರಸ್ಟ್ ಸದಸ್ಯ ಮೋಹನ್ ದಾಸ್ ಶಿರಾಜೆ, ಹಾಗೂ ಸರ್ವ ಸದಸ್ಯರು, ಕಲಿಕಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ವೇದಾಮೃತ ಚಿಕಿತ್ಸಾಲಯದಲ್ಲಿ ಉಚಿತ ಮೂಳೆ ಖನಿಜಾಂಶ ಸಾಂದ್ರತೆ ತಪಾಸಣಾ ಶಿಬಿರ

ಲೋಕಸಭಾ ಚುನಾವಣೆ ಹಿನ್ನೆಲೆ, ಕಲ್ಲುಗುಂಡಿಯಲ್ಲಿ CRPF ಹೆಜ್ಜೆ, ಆಕರ್ಷಕ ಪಥ ಸಂಚಲನ ಕಾನೂನು ಸುವ್ಯವಸ್ಥೆಯ ಪಾಠ

ಕಡಬ: ಒಂದು ಕಿಡಿಯಿಂದ ಗುಡ್ಡಕ್ಕೆ ಹತ್ತಿಕೊಂಡ ಬೆಂಕಿ, ತಪ್ಪಿದ ದುರಂತ