ಕರಾವಳಿ

ಕಡಬ: ಒಂದು ಕಿಡಿಯಿಂದ ಗುಡ್ಡಕ್ಕೆ ಹತ್ತಿಕೊಂಡ ಬೆಂಕಿ, ತಪ್ಪಿದ ದುರಂತ

349
Spread the love

ಕಡಬ: ಇಲ್ಲಿನ ಕಳಾರ ಕಾರು ಶೋ ರೂಂ ಸಮೀಪ ಆಕಸ್ಮಿಕವಾಗಿ ಬೆಂಕಿ ಬಿದ್ದು ಗುಡ್ಡ ಪ್ರದೇಶಕ್ಕೆ ಹಬ್ಬಿದ ಘಟನೆ ಇದೀಗ ನಡೆದಿದೆ. ವಿದ್ಯುತ್ ಟ್ರಾನ್ಸ್ ಫಾರ್ಮರ್ ನಿಂದ ಆಕಸ್ಮಿಕವಾಗಿ ಸ್ಪಾರ್ಕ್ ಆದ ಕಿಡಿ ಹುಲ್ಲು ತುಂಬಿದ ಪ್ರದೇಶಕ್ಕೆ ತಾಗಿದ್ದರಿಂದ ಪರಿಸರಕ್ಕೆ ಹಬ್ಬಿದೆ ಎಂದು ಹೇಳಲಾಗಿದೆ.

ಬೆಂಕಿ ನಂದಿಸಲು ಪೊಲೀಸರ ಜತೆ ಸ್ಥಳೀಯರು ಹರಸಾಹಸ ಪಟ್ಟರು. ಕೊನೆಗೆ ಬೆಂಕಿ ನಂದಿಸಲಾಗಿದೆ. ಹೆಚ್ಚಿನ ಅನಾಹುತವನ್ನು ತಪ್ಪಿಸಲಾಗಿದೆ. ಇಷ್ಟೆಲ್ಲ ಆದರೂ 112 ಸಹಾಯವಾಣಿ ಸಂಖ್ಯೆಯಿಂದ ತುರ್ತು ಸ್ಪಂದನೆ ಸಿಗದಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿದ್ಯುತ್ ಟ್ರಾನ್ಸ್ ಫಾರ್ಮರ್, ವಿದ್ಯುತ್ ಕಂಬಗಳ ಸುತ್ತ ಹುಲ್ಲುಗಾವಲು ಆವರಿಸಿದ್ದು ಇದನ್ನು ತೆರವು ಮಾಡದಿರುವುದೇ ಬೆಂಕಿ ಹಬ್ಬಲು ಕಾರಣವಾಗಿದೆ. ವಾರದಲ್ಲಿ ಒಂದು ದಿನ ದುರಸ್ತಿ ನೆಪದಲ್ಲಿ ವಿದ್ಯುತ್ ಸ್ಥಗಿತ ಗೊಳಿಸಿದರೂ ಕಂಬಗಳ ಕೆಲ ಭಾಗದಲ್ಲಿರುವ ಹುಲ್ಲು ಕಡ್ಡಿಗಳನ್ನು ತೆರವು ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

See also  ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ (ರಿ) ಮಂಗಳೂರಿನ ಕಚೇರಿ ನವೀಕೃತಗೊಂಡು ಶುಭಾರಂಭ, ಹಲವಾರು ಗಣ್ಯರ ಆಗಮನ, ಶುಭ ಹಾರೈಕೆ
  Ad Widget   Ad Widget   Ad Widget   Ad Widget   Ad Widget   Ad Widget