ಕ್ರೀಡೆ/ಸಿನಿಮಾ

ಚಿತ್ರೀಕರಣದ ವೇಳೆ ಅವಘಡ,ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಗೆ ಗಾಯ

ನ್ಯೂಸ್ ನಾಟೌಟ್ : ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ” ಫ್ರಾಜೆಕ್ಟ್ ಕೆ” ಚಿತ್ರೀಕರಣ ವೇಳೆ ಬಿದ್ದು ಗಾಯಗೊಂಡಿದ್ದಾರೆ. ಇದೀಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಹೊಸ ಸಿನಿಮಾ ” ಫ್ರಾಜೆಕ್ವ್ ಕೆ ” ಸಿನಿಮಾದ ಶೂಟಿಂಗ್ ವೇಳೆ ಓಡುವ ಸೀನನ್ನು ಮಾಡುವ ವೇಳೆ ಈ ದುರಂತ ಸಂಭವಿಸಿದೆ .ಈ ಸಂದರ್ಭ ಕಾಲು ಜಾರಿ ಬಿದ್ದ ಪರಿಣಾಮ ಪಕ್ಕೆಲುಬು ಮುರಿದಿದೆ ಎಂದು ತಿಳಿದು ಬಂದಿದೆ. ತಕ್ಷಣ ಅವರನ್ನು ಹೈದಾರಾಬಾದ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವಿಶ್ರಾಂತಿಯ ಬಳಿಕ ಸಿನಿಮಾ ಶೂಟಿಂಗ್ ಮುಂದುವರೆಯಲಿದೆ ಎಂದು ಸಿನಿಮಾ ಇಂಡಸ್ಟ್ರೀ ಮ್ಯಾನೇಜರ್ ತಿಳಿಸಿದ್ದಾರೆ.

ಡಾರ್ಲಿಂಗ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ʼಪ್ರಾಜೆಕ್ಟ್ ಕೆʼ ಚಿತ್ರವು ಜನವರಿ 12, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಸಿನಿಮಾದಲ್ಲಿ ಬಿಟೌನ್ ಬೆಡಗಿ ದೀಪಿಕಾ ಪಡುಕೋಣೆ ಡಾರ್ಲಿಂಗ್ ಗೆ ಜೊತೆಯಾಗಿ ನಟಿಸಿದ್ದಾರೆ. ʼಪ್ರಾಜೆಕ್ಟ್ ಕೆʼ ಅನ್ನು ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ. ಪ್ರಾಜೆಕ್ಟ್ ಕೆ ಪ್ರೇಕ್ಷಕರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರವು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸಾಕಷ್ಟು ಗಮನ ಸೆಳೆಯಲಿದೆ.ಪ್ರಾಜೆಕ್ಟ್ ಕೆ ಅನ್ನು ವೈಜಯಂತಿ ಮೂವೀಸ್ ನಿರ್ಮಿಸಿದೆ.  ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಸಿನಿಮಾ ಒಂದು ಟೈಮ್ ಟ್ರಾವೆಲ್ ವಿಷಯಾಧಾರಿತ ಚಿತ್ರ ಅಂತ ಹೇಳಲಾಗಿತ್ತು. ಆದರೆ, ಟೈಮ್ ಟ್ರಾವೆಲರ್ ಸಿನಿಮಾ ಅಲ್ಲ ಅಂತ ಚಿತ್ರದ ಸಂಭಾಷಣೆ ಬರೆದ ಸಾಯಿ ಮಾಧವ್ ಬುರಾ ಹೇಳಿದ್ದರು. ಚಿತ್ರದಲ್ಲಿ ಟೈಮ್ ಮೆಷಿನ್ ಅಥವಾ ಟೈಮ್ ಟ್ರಾವೆಲರ್ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

Related posts

‘ಬಾಲಿವುಡ್ ಬಾದ್ ಶಾ’ ನಟ ಶಾರುಖ್ ಖಾನ್ ಜೊತೆ ನಟಿಸಲಿದ್ದಾರಾ ನಮ್ಮ KGF ಖ್ಯಾತಿಯ ನಟ ಯಶ್..? ಯಾವುದು ಆ ಸಿನಿಮಾ? ಇಲ್ಲಿದೆ ಫುಲ್ ಡಿಟೇಲ್ಸ್

ಬಿಗ್ ಬಾಸ್ ಸ್ಪರ್ಧಿ ರೆಹಮಾನ್ ಹಸನ್ ಮತ್ತೆ ಟಿವಿ9ಗೆ

ಬೆದರಿಕೆ ಕರೆಗಳಿಗೆ ಹೆದರಿದರಾ ಸಲ್ಮಾನ್? ಬುಲೆಟ್‌ ಪ್ರೂಫ್ ಕಾರು ಖರೀದಿಸಿದ ಬಾಲಿವುಡ್ ನಟ!