ಬೆಂಗಳೂರು: ಪವರ್ ಟಿವಿಯಲ್ಲಿ ಕೆಲಸ ಮಾಡುತ್ತಿದ್ದ ಖ್ಯಾತ ನಿರೂಪಕ ರೆಹಮಾನ್ ಹಸನ್ ಮತ್ತೆ ಟಿವಿ9ಗೆ ಮರಳುತ್ತಿದ್ದಾರೆ. ಟಿವಿ9ನಲ್ಲಿ ನಿರೂಪಕರಾಗಿ ಗುರುತಿಸಿಕೊಂಡಿದ್ದ ರೆಹಮಾನ್ ಅವರಿಗೆ ಬಿಗ್ ಬಾಸ್ ನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತ್ತು.ಇದಾದ ಬಳಿಕ ಅವರು ಕನ್ನಡದ ಕೆಲ ಚಿತ್ರಗಳಲ್ಲಿಯೂ ಅಭಿನಯಿಸಿದ್ದರು ಹಾಗೂ ಸೀರಿಯಲ್ ನಲ್ಲಿಯೂ ಕಾಣಿಸಿಕೊಂಡಿದ್ದರು. ಇದೀಗ ತಮ್ಮ ಮಾತೃ ಸಂಸ್ಥೆಗೆ ತೆರಳುವ ಬಗ್ಗೆ ಸಂತಸ ಹಂಚಿಕೊಂಡಿರುವ ರೆಹಮಾನ್ ಅವರು “ನನ್ನ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇನೆ. ಮುಖ್ಯ ನಿರ್ಮಾಪಕ ಹಾಗೂ ನಿರೂಪಕನಾಗಿ ಟಿವಿ9 ಗೆ ಹಿಂತಿರುಗುತ್ತಿದ್ದೇನೆ. ಪ್ರೀತಿ ಮತ್ತು ಮನ್ನಣೆ ದೊರೆತ ಸ್ಥಳವಿದು. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದಿದ್ದಾರೆ.