ಮಹಿಳೆ-ಆರೋಗ್ಯಸುಳ್ಯ

ಸುಳ್ಯ: ಶೀತ, ಜ್ವರಕ್ಕೆ ನಡುಗಿದ ಜನ, ಆಸ್ಪತ್ರೆ, ಕ್ಲೀನಿಕ್ ಈಗ ಫುಲ್ ರಷ್..!, ಆರೋಗ್ಯ ಇಲಾಖೆಯಿಂದ ಒಂದಷ್ಟು ಬಿಗಿ ಕ್ರಮ ಅಗತ್ಯ

ನ್ಯೂಸ್ ನಾಟೌಟ್: ಸುಳ್ಯ ತಾಲೂಕು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಇದೀಗ ಶೀತ, ಜ್ವರ, ಕೆಮ್ಮು – ನೆಗಡಿಯಿಂದ ಜನ ತತ್ತರಗೊಂಡಿದ್ದಾರೆ. ಸುಳ್ಯದ ಬಹುತೇಕ ಆಸ್ಪತ್ರೆ ಹಾಗೂ ಕ್ಲೀನಿಕ್ ಗಳಲ್ಲಿ ಜನ ಔಷಧಿಗಾಗಿ ಕ್ಯೂ ನಿಂತಿರುವುದು ಸಾಮಾನ್ಯವಾಗಿಬಿಟ್ಟಿದೆ.

ಜನ ಈಗ ಹೆಚ್ಚು ಜಾಗರೂಕತೆಯಿಂದ ಇರಬೇಕಿದೆ. ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ. ಸುಳ್ಯ ನಗರ ಹಾಗೂ ತಾಲೂಕಿನ ಕೆಲವು ಹೋಟೆಲ್ ಗಳಲ್ಲಿ ಗ್ರಾಹಕರಿಗೆ ಕುಡಿಯಲು ತಣ್ಣೀರು ನೀಡಲಾಗುತ್ತಿದೆ ಅನ್ನುವ ದೂರುಗಳು ಕೇಳಿ ಬರುತ್ತಿದೆ.

ಇದರಿಂದ ಜನರ ಆರೋಗ್ಯ ಕೆಡುವ ಸಾಧ್ಯತೆ ಕೂಡ ಇದೆ. ಆದಷ್ಟು ಮನೆ ಊಟ ಸೇವಿಸಿ, ಹೋಟೆಲ್ ಊಟ ಅನಿವಾರ್ಯವಾದರೆ ಅಲ್ಲಿ ಬಿಸಿ ನೀರನ್ನು ಕೇಳಿ ಪಡೆದು ಕುಡಿಯಿರಿ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಹೋಟೆಲ್ ಗಳತ್ತ ಗಮನವಹಿಸಬೇಕಿದೆ. ಬಿಸಿ ನೀರು ನೀಡದ ಹೋಟೆಲ್ ಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕಿದೆ.

Click

https://newsnotout.com/2024/09/sameer-acharya-kananda-news-police-case-kannada-news/
https://newsnotout.com/2024/09/mallikarjun-karge-and-narendra-modi-viral-news-health-kannada-news/
https://newsnotout.com/2024/09/kasaragod-kannada-news-nomore-baby-kasaragod-case-kannada-news/

Related posts

ಸಂಗೀತ ಕಾರ್ಯಕ್ರಮ ನಡೆಸುತ್ತಿರುವಾಗ ವೇದಿಕೆಯಲ್ಲಿ ನೋವಿನಿಂದ ಒದ್ದಾಡಿದ ಖ್ಯಾತ ಗಾಯಕ..! ಸೋನು ನಿಗಮ್ ಆಸ್ಪತ್ರೆಗೆ ದಾಖಲು..!

ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ವರ್ಗಾವಣೆ

ಖರ್ಗೆ ಗೆಲುವಿನ ಲೆಕ್ಕಾಚಾರದ ಭಾಷಣದ ವೇಳೆ ಸುಳ್ಯಕ್ಕೆ ತಂಪೆರೆದ ಮಳೆ, ಶುಭ ಸೂಚನೆ ಎಂದ್ರು ಖರ್ಗೆ