ಜೀವನ ಶೈಲಿ/ಆರೋಗ್ಯಮಹಿಳೆ-ಆರೋಗ್ಯವಿಡಿಯೋವೈರಲ್ ನ್ಯೂಸ್ಸಿನಿಮಾ

ಸಂಗೀತ ಕಾರ್ಯಕ್ರಮ ನಡೆಸುತ್ತಿರುವಾಗ ವೇದಿಕೆಯಲ್ಲಿ ನೋವಿನಿಂದ ಒದ್ದಾಡಿದ ಖ್ಯಾತ ಗಾಯಕ..! ಸೋನು ನಿಗಮ್ ಆಸ್ಪತ್ರೆಗೆ ದಾಖಲು..!

89
Spread the love

ನ್ಯೂಸ್ ನಾಟೌಟ್: ಖ್ಯಾತ ಗಾಯಕ ಸೋನು ನಿಗಮ್ (Sonu Nigam)ಆರೋಗ್ಯದಲ್ಲಿ ಏರುಪೇರಾಗಿದೆ. ಪುಣೆಯಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ವೇಳೆ ಬೆನ್ನು ನೋವಿನಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಮ್ಮ ಆರೋಗ್ಯದ ಬಗ್ಗೆ ಫ್ಯಾನ್ಸ್‌ ಗೆ ಗಾಯಕ ಸೋಶಿಯಲ್ ಮೀಡಿಯಾದಲ್ಲಿ ವಿವರಿಸಿ ಪೋಸ್ಟ್ ಹಾಕಿದ್ದಾರೆ.

ಇತ್ತೀಚೆಗೆ ಲೈವ್ ಕಾನ್ಸರ್ಟ್ ವೇಳೆ ಅವರಿಗೆ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಂಡಿದೆ. ನೋವು ಅನ್ನು ತೋರಿಸಿಕೊಳ್ಳದೇ ಒಪ್ಪಿಕೊಂಡಿದ್ದ ಸಂಗೀತ ಕಾರ್ಯಕ್ರಮವನ್ನು ಮುಗಿಸಿಕೊಟ್ಟು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆ ನಂತರ ಏನಾಯ್ತು ಎಂದು ಅವರು ವಿವರಿಸಿದ್ದಾರೆ.

ಸೋನು ನಿಗಮ್ ಪೋಸ್ಟ್‌ನಲ್ಲಿ, “ನನ್ನ ಜೀವನದ ಅತ್ಯಂತ ಕಷ್ಟದ ದಿನ. ನಾನು ಹಾಡು ಹೇಳುತ್ತಾ, ವೇದಿಕೆ ಮೇಲೆಲ್ಲ ಓಡಾಡುತ್ತಾ ಇದ್ದೆ. ಆಗ ನನಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಆದರೆ, ಹೇಗೋ ಆ ಸಂದರ್ಭ ನಿಭಾಯಿಸಿದೆ. ಅಭಿಮಾನಿಗಳು ನನ್ನಿಂದ ಎಷ್ಟನ್ನು ನಿರೀಕ್ಷಿಸುತ್ತಾರೋ ಅದಕ್ಕಿಂತ ಕಡಿಮೆ ಕೊಡಲು ನನಗೆ ಇಷ್ಟ ಇಲ್ಲ” ಎಂದು ಬರೆದುಕೊಂಡಿದ್ದಾರೆ.

ಇನ್ನೂ ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ಅವರು ಹಾಡಿದ್ದಾರೆ. ಬಹುಭಾಷಾ ಗಾಯಕನಾಗಿ ಗುರುತಿಸಿಕೊಂಡಿದ್ದಾರೆ.

See also  ಸುಳ್ಯ: ಮನೆ ಮೇಲೆ ಒರಗಿದ ಲೋಡ್ ಲಾರಿ, ಟಿಪ್ಪರ್ ಮೇಲಕ್ಕೆತ್ತಲು ಹರಸಾಹಸ!
  Ad Widget   Ad Widget   Ad Widget   Ad Widget