ಕರಾವಳಿ

ಅರಂತೋಡು: ಮೂರು ಆಡುಗಳನ್ನು ಬಲಿ ಪಡೆದಿದ್ದ ಚಿರತೆಯಿಂದ ಮತ್ತೊಂದು ದಾಳಿ, ಕರುವನ್ನು ಕಿತ್ತು ತಿಂದ ಚಿರತೆ, ಸ್ಥಳೀಯರಲ್ಲಿ ಆತಂಕ

ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನ ಅರಂತೋಡಿನಲ್ಲಿ ಚಿರತೆ ಹಾವಳಿ ಜೋರಾಗಿದೆ. ಇತ್ತೀಚಿಗೆ ಮೂರು ಆಡುಗಳನ್ನು ಬಲಿ ಪಡೆದಿದ್ದ ಚಿರತೆ ಇದೀಗ ಎರಡು ವರ್ಷದ ಕರುವೊಂದನ್ನು ಕೊಂದು ತಿಂದು ಹಾಕಿದೆ. ಜ.7ರಂದು ಅರಂತೋಡು ಗ್ರಾಮದ ಅಡ್ಕಬಳೆ ಎಂಬಲ್ಲಿ ಘಟನೆ ನಡೆದಿದೆ.

ಅರಂತೋಡು ಗ್ರಾಮದ ಅಡ್ಕಬಳೆಯ ಲೀಲಾವತಿ ಎಂಬುವವರ ಮನೆಯ ತೋಟದಲ್ಲಿ ಕರುವನ್ನು ಮೇಯಲು ಬಿಡಲಾಗಿತ್ತು. ಸಂಜೆಯಾದರೂ ಕರು ಮನೆಗೆ ಬಂದಿರಲಿಲ್ಲ. ಮನೆಯವರು ತೋಟಕ್ಕೆ ಹೋಗಿ ನೋಡಿದ ವೇಳೆ ಕರುವಿನ ಮೃತದೇಹ ಅರ್ಧ ತಿಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಚಿರತೆ ದಾಳಿಯಿಂದ ಕರು ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಕಳೆದ ಎರಡು ದಿನಗಳ ಹಿಂದೆ ಇದೇ ಮನೆಯಲ್ಲಿ ಸಾಕುತ್ತಿದ್ದ ಮೂರು ಆಡುಗಳನ್ನು ರಾತ್ರಿ ಸಮಯದಲ್ಲಿ ಚಿರತೆ ಕೊಂದು ಹಾಕಿತ್ತು. ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರು ಭಯಬೀತರಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯವರು ಭೇಟಿ ನೀಡಿರುವುದಾಗಿ ತಿಳಿದುಬಂದಿದೆ.

Related posts

ಕೇಸರಿ ಹಾಕಿದವರು ರಾಷ್ಟ್ರ ವಿರೋಧಿಗಳು: ಡೀಸೋಜ ಹೇಳಿಕೆಗೆ ವಜ್ರದೇಹಿ ಮಠದ ಸ್ವಾಮೀಜಿ ಕಿಡಿ

ತುಂಬಾ ಹುಡುಗೀರ ಜತೆ ಮಲಗಿದ್ದೇನೆ: ಮತ್ತೊಮ್ಮೆ ಸದ್ದು ಮಾಡುತ್ತಿರುವ ಕನ್ನಡದ ಖ್ಯಾತ ನಿರ್ದೇಶಕ

ಪುತ್ತೂರು: ಅನ್ಯಕೋಮಿನ ಯುವಕ-ಯುವತಿಯರು ಪತ್ತೆ