ಮಂಗಳೂರು : ಕೇಸರಿ ಹಾಕಿದವರು ರಾಷ್ಟ್ರ ವಿರೋಧಿಗಳು ಎಂದಿದ್ದ ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜ ಹೇಳಿಕೆಗೆ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಕಿಡಿಕಾರಿದ್ದಾರೆ. ಮಂಗಳೂರಿನ ವಿಶ್ವ ಹಿಂದು ಪರಿಷತ್, ಭಜರಂಗದಳ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿದರು.
ಐವಾನ್ ಡಿಸೋಜ ಅವರಿಗೆ ಪ್ರತಿನಿಧಿಸುವ ಪಕ್ಷವೇ ನೆಲೆ ಇಲ್ಲದಾಗುತ್ತಿದೆ. ಅದರ ಜೊತೆಗೆ ಐ ಹೋಗಿ ವಾನ್ ಅಷ್ಟೇ ಆಗಿದ್ದಾರೆ. ಅವರಿಗೂ ನೆಲೆ ಇಲ್ಲದ ಸ್ಥಿತಿ. ಅದರ ನಡುವೆ, ಕೇಸರಿ ಬಗ್ಗೆ ಟೀಕಿಸಲು ಹೋದರೆ ಅವರ ಭವಿಷ್ಯವೇ ಮಂಕಾಗಲಿದೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಇದೆಲ್ಲದೆ, ಇವರ ಇತಿಹಾಸದ ಬಗ್ಗೆ ಹೇಳಲು ಹೋದರೆ, ಇವರೇ ಕೇಸರಿ ಹೆಣ್ಣನ್ನು ಮದುವೆಯಾದವರು. ಇವರ ಮನೆಯಲ್ಲೇ ಕೇಸರಿ ಹೆಣ್ಣನ್ನು ಮತಾಂತರ ಮಾಡಿದ್ದಾರೆ. ಕೇಸರಿ ಹೆಣ್ಣನ್ನು ಮನೆಯಲ್ಲಿ ಇಟ್ಟುಕೊಂಡು ಕೇಸರಿ ಹಾಕುವವರು, ಕೇಸರಿ ಬಣ್ಣದ ಬಗ್ಗೆ ಮಾತನಾಡುತ್ತಾರೆ. ಕೇಸರಿಯನ್ನು ಬಗಲಲ್ಲಿಟ್ಟುಕೊಂಡು ಇವರು ಕೇಸರಿಗಳನ್ನೇ ರಾಷ್ಟ್ರ ದ್ರೋಹಿಗಳೆನ್ನುವುದು ಎಷ್ಟು ಸರಿ ಎಂದು ರಾಜಶೇಖರಾನಂದ ಸ್ವಾಮೀಜಿ ಪ್ರಶ್ನೆ ಮಾಡಿದ್ದಾರೆ.