ಸುಳ್ಯ

5 ವರ್ಷದ ಹೆಣ್ಣು ಮಗುವಿನ ಜೀವ ಉಳಿಸಲು 50 ಲಕ್ಷ ರೂ. ಬೇಕಾಗಿದೆ, ತಕ್ಷಣ ನೆರವಾಗುವಿರಾ? ಪುಟ್ಟ ಜೀವ ಉಳಿಸೋಣ ಬನ್ನಿ

ಸುಳ್ಯ: ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ 5 ವರ್ಷದ ಹೆಣ್ಣು ಮಗು ಜೆಮಿನಾ ಕೆ ಜಾನ್‌ ಅಪರೂಪದ ಎಪ್ಸ್ಟೀನ್ ಬಾರ್ ವೈರಸ್ (ಇಬಿವಿ) ಸೋಂಕು, ಹಿಮೋಫಾಗೊಸಿಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್ (ಎಚ್ಎಲ್ಎಚ್) ಸಿಂಡ್ರೋಮ್ ಮತ್ತು ತುರ್ತು ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ನಿಂದ ಬಳಲುತ್ತಿದೆ.ಈ ಮಗುವಿನ ಜೀವ ಉಳಿಸಲು ಮುಂದಿನ ಒಂದು ತಿಂಗಳ ಒಳಗಾಗಿ ಚಿಕಿತ್ಸೆ ನೀಡಲೇಬೇಕಿದೆ. ಮಗು ಸದ್ಯ ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಚಿಕಿತ್ಸೆಗೆ ಅಗತ್ಯವಿರುವ ಒಟ್ಟು ಮೊತ್ತವನ್ನು ಸಂಗ್ರಹಿಸಲು ಕುಟುಂಬವು ಎಲ್ಲ ಪ್ರಯತ್ನ  ಮಾಡುತ್ತಿದೆ. ಆದರೆ ವೈದ್ಯಕೀಯ ವೆಚ್ಚ ಭರಿಸಲು 50,00,000 ರೂ. ಅಗತ್ಯವಿದೆ. ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸಲು ಕುಟುಂಬ ಹರಸಾಹಸ ಮಾಡುತ್ತಿದೆ. ಮಗುವಿನ ತಂದೆ ಕೆ.ಪಿ.ಜಾನಿಯವರು ಮನೆ ಕಟ್ಟುವ ಕೆಲಸ ಮಾಡುವ ಸಣ್ಣ ಗುತ್ತಿಗೆದಾರರು. ಕಟ್ಟಡ ಕಾರ್ಮಿಕರ ಪರ ಹೋರಾಟ ನಡೆಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡವರು. ಮಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುವ ಅವರ ಕುಟುಂಬದ ಹೋರಾಟದಲ್ಲಿ ನಾವೂ ಭಾಗಿಯಾಗೋಣ. ಮಗು ಮತ್ತೆ ಮರಳಿ ಮನೆಗೆ ಬೇಗ ಬರುವಂತಾಗಲಿ, ಎಂದಿನಂತೆ ಆಟ ಪಾಠಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಆಶಿಸಿ ನಮ್ಮ ಕೈನಿಂದ ಆದ ಸಹಾಯ ಮಾಡೋಣ. ಇದು ನಮ್ಮೆಲ್ಲ ಓದುಗರಲ್ಲಿ ನ್ಯೂಸ್ ನಾಟೌಟ್ ತಂಡದ ಕಳಕಳಿಯ ಮನವಿಯಾಗಿದೆ.

ನೀವು ನಗದನ್ನು ಕಳಿಸಲು ಇರುವ ದಾರಿ, ಕೆಳಗಿನ ಲಿಂಕ್‌ ಒತ್ತಿ ಧನ ಸಹಾಯ ನೀಡಬಹುದು

https://milaap.org/fundraisers/support-baby-jemina-k-john?utm_source=whatsapp&utm_medium=fundraisers-title

To pay via Paytm (for Android users only) – https://milaap.org/fundraisers/support-baby-jemina-k-john/deeplink?deeplink_type=paytm

Related posts

ಸುಳ್ಯ: ಕರ್ನಾಟಕ ಶಿಕ್ಷಕರ ನೇಮಕಾತಿ 2023-2024 , ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಎನ್ ಎಮ್ ಸಿಯ 16 (Alumni) ವಿದ್ಯಾರ್ಥಿಗಳು ಆಯ್ಕೆ

ಕಾರ್ಯಕ್ಷೇತ್ರದ ಸದಸ್ಯರಿಗೆ ಲಾಭಾಂಶ ವಿತರಣೆ

ಸಂಪಾಜೆ: ಗೌರಿ ಲಂಕೇಶ್ ಹತ್ಯೆ ಪ್ರಕರಣ, ಸಂಪಾಜೆಯ ನಿವಾಸಿಗೆ ಸುದೀರ್ಘ 6 ವರ್ಷದ ಬಳಿಕ ಜಾಮೀನು