ಕ್ರೈಂವೈರಲ್ ನ್ಯೂಸ್

ಮಾರಕಾಸ್ತ್ರಗಳನ್ನು ಹಿಡಿದು ರೀಲ್ಸ್ ಮಾಡುತ್ತಿದ್ದ 5 ಮಂದಿ ಅರೆಸ್ಟ್..! ಆಯುಧಗಳು ಪೊಲೀಸ್ ವಶಕ್ಕೆ..!

285
Pc Cr: Vartha bharati
Spread the love

ನ್ಯೂಸ್ ನಾಟೌಟ್: ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಆರೋಪದಲ್ಲಿ ಐವರನ್ನು ಕಲಬುರಗಿ ನಗರ ಪೊಲೀಸರು ಬಂಧಿಸಿದ್ದಾರೆ.

ಆಝಾದಪುರದ ಉಮರ್ ಕಾಲನಿ ನಿವಾಸಿಗಳಾದ ಗುಲಾಮ್ ನಬಿ ಅಲಿಯಾಸ್ ಬಿಲಾಲ್(21), ಮುಹಮ್ಮದ್ ಪರ್ವೇಶ್(27), ಶೇಕ್ ಶೋಯೆಬ್(22), ಸೈಯದ್ ಕದೀರ್(24), ಗರೀಬ್ ನವಾಝ್ ಕಾಲನಿ ನಿವಾಸಿ ಅಸ್ಲಂ (24) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಮೊದಲ ಆರೋಪಿಯಾಗಿರುವ ಗುಲಾಮ್ ನಬಿ ವಿರುದ್ಧ ಇಲ್ಲಿನ ವಿಶ್ವವಿದ್ಯಾನಿಲಯ ಪೊಲೀಸ್ ಠಾಣೆಯಲ್ಲಿ ಕಲಂ 28 ಭಾರತೀಯ ಆಯುಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಉಳಿದ ನಾಲ್ವರು ಆರೋಪಿಗಳ ವಿರುದ್ಧ ಕಲಂ 129 BNSS (PAR)ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ಯುವಕರು ಕೈಯಲ್ಲಿ ಮಾರಕಾಸ್ತ್ರ ಮತ್ತು ಪಿಸ್ತೂಲ್ ತರಹ (ಅನುಕರಣೆ) ಹೋಲುವ ಆಯುಧಗಳನ್ನು ಹಿಡಿದುಕೊಂಡು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಸಾರ್ವಜನಿಕರಿಗೆ ಭಯವನ್ನು ಹುಟ್ಟಿಸುತ್ತಿದ್ದರು. ಅಂತಹವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅವರಿಂದ ಮಾರಕಾಸ್ತ್ರ, ಪಿಸ್ತೂಲ್ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.  

See also  ಶುಲ್ಕ ಕಟ್ಟಲು ಒತ್ತಾಯ, ನೇಣಿಗೆ ಶರಣಾದ ವಿದ್ಯಾರ್ಥಿನಿ
  Ad Widget   Ad Widget   Ad Widget   Ad Widget