ಕ್ರೀಡೆ/ಸಿನಿಮಾ

ಒಲಿಂಪಿಕ್ಸ್: ಭಾರತಕ್ಕೆ ಮತ್ತೊಂದು ಪದಕ; ಕುಸ್ತಿಯಲ್ಲಿ ಬೆಳ್ಳಿ ಗೆದ್ದ ರವಿಕುಮಾರ್ ದಹಿಯಾ

41

ಟೋಕಿಯೊ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪುರುಷರ ಫ್ರೀಸ್ಟೈಲ್ 57 ಕೆಜಿ ಫೈನಲ್‌ನಲ್ಲಿ ಕುಸ್ತಿಪಟು ರವಿ ದಹಿಯಾ ಆರ್‌ಒಸಿಯ ಜಾವೂರ್ ಉಗೆವ್ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟರು. ಇಂದು ಚಿನ್ನಕ್ಕಾಗಿ ನಡೆದ ಸೆಣೆಸಾಟದಲ್ಲಿ ರವಿ ದಹಿಯಾ 4-7 ಅಂಕಗಳೊಂದಿಗೆ ಉಗೆವ್ ಗೆ ಶರಣಾದರು. ಈ ಮೂಲಕ ಭಾರತಕ್ಕೆ ಎರಡು ಬೆಳ್ಳಿ ಪದಕ ಬಂದಂತಾಗಿದೆ. ಮೀರಾ ಬಾಯಿ ಚಾನು ವೇಟ್ ಲಿಫ್ಟಿಂಗ್ ನಲ್ಲಿ ಮೊದಲಿಗೆ ಬೆಳ್ಳಿ ಪದಕ ಗೆದ್ದಿದ್ದರು. ಕ್ರೀಡಾಕೂಟದಲ್ಲಿ ಭಾರತ ಎರಡು ಬೆಳ್ಳಿ ಮತ್ತು ಮೂರು ಕಂಚು ಸೇರಿ ಒಟ್ಟು ಐದು ಪದಕಗಳನ್ನು ಗೆದ್ದಂತಾಗಿದೆ. 23 ವರ್ಷದ ದಹಿಯಾ ಭಾರತದ ಕಿರಿಯ ಒಲಂಪಿಕ್ ಚಾಂಪಿಯನ್ ಆಗುವ ನಿರೀಕ್ಷೆಯಿತ್ತು. ಆದರೆ ರಷ್ಯನ್ ಆಟಗಾರ ಗೆಲುವು ಸಾಧಿಸಿದ್ದಾರೆ.2019ರ ವಿಶ್ವ ಚಾಂಪಿಯನ್ ಶಿಪ್‌ನಲ್ಲಿಯೂ ದಹಿಯಾ ಉಗುವ್ ವಿರುದ್ಧ ಸೋತಿದ್ದರು.