ಕರಾವಳಿಕೊಡಗು

ಸಂಪಾಜೆ :ಇಂದಿನಿಂದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವದ ಸಂಭ್ರಮ

ನ್ಯೂಸ್ ನಾಟೌಟ್ : ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಇಂದಿನಿಂದ (ದಿನಾಂಕ 14-11-2023ನೇ ಮಂಗಳವಾರ) ದೀಪಾವಳಿ ಬಲಿಪಾಡ್ಯಮಿಯಿಂದ ಪ್ರತೀ ದಿನ ಸಾಯಂಕಾಲ ಗಂಟೆ 7-00ರಿಂದ ಶ್ರೀ ದೇವರಿಗೆ ಕಾರ್ತಿಕ ದೀಪೋತ್ಸವವು ಆರಂಭವಾಗಲಿದೆ.

14-11-2023ನೇ ಮಂಗಳವಾರ ಸಾಯಂಕಾಲ ಪಯಸ್ವಿನಿ ಯುವಕ ಸಂಘ ಸಂಪಾಜೆ ಇವರ ವತಿಯಿಂದ ದೇವಸ್ಥಾನದಲ್ಲಿ ಬಲಿಯೇಂದ್ರ ಮರ ಆಳುವ ಕಾರ್ಯಕ್ರಮದಿಂದ ಡಿಸೆಂಬರ್ 12-12-2023ನೇ ಮಂಗಳವಾರ ಶ್ರೀ ದೇವರಿಗೆ ರಂಗಪೂಜೆ ಯೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಗಲಿದೆ.ನಾಡಿನ ಸಮಸ್ತ ಭಕ್ತರು ಕಾರ್ತಿಕ ಮಾಸದ ಈ ದೀಪೋತ್ಸವ ಕಾರ್ಯದಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ,ಶ್ರೀ ದೇವರ ದೀಪೋತ್ಸವವನ್ನು ಯಶಸ್ವಿಗೊಳಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅಧ್ಯಕ್ಷರು ,ಕಾರ್ಯದರ್ಶಿ,ಮೊಕ್ತೇಸರರು/ಗೌರವಾಧ್ಯಕ್ಷರು,ಸದಸ್ಯರು ತಿಳಿಸಿದ್ದಾರೆ.

Related posts

ಸಚಿವ ಎಸ್‌.ಅಂಗಾರ ಬೆಳ್ಳಾರೆಯ ದರ್ಖಾಸ್ ಶಾಲೆಗೆ ಭೇಟಿ

ಸುಳ್ಯದ ಬಿಜೆಪಿ ಮಂಡಲ ಅಧ್ಯಕ್ಷರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೇಟ್‌..?

ಸುಳ್ಯ: ಕುದ್ಪಾಜೆಯ 20 ಮನೆಗಳನ್ನು ಶನಿವಾರದಿಂದ ಕಗ್ಗತ್ತಲಿನಲ್ಲಿರಿಸಿದ ಮೆಸ್ಕಾಂ..!, ಸುಳ್ಯ, ಮಂಗಳೂರಿಗೆ ದೂರು ಕೊಟ್ಟರೂ ಪ್ರಯೋಜನವಿಲ್ಲ..! ಎಂಥಾ ಅವಸ್ಥೆ ಮಾರಾಯೆರೇ..!