Uncategorized

ಸಂಪಾಜೆ, ಚೆಂಬು ಗ್ರಾಮದಲ್ಲಿ ಮತ್ತೆ ಭೂಕಂಪ..!

ನ್ಯೂಸ್ ನಾಟೌಟ್ : ಸಂಪಾಜೆ, ಹಾಗೂ ಚೆಂಬು ಗ್ರಾಮದಲ್ಲಿ ಮತ್ತೆ ಭಾರಿ ಶಬ್ಧದೊಂದಿಗೆ ಭೂಕಂಪ ಸಂಭವಿಸಿದೆ. ಭಾನುವಾರ ಬೆಳಗ್ಗೆ 6.23 ಕ್ಕೆ ಭೂಕಂಪವಾಗಿದೆ. ಕೊಡಗಿನ ಕರಿಕೆ, ಪೆರಾಜೆ, ಸುಳ್ಯ ತಾಲೂಕು ಸೇರಿದಂತೆ ಬಹುತೇಕ ಭಾಗಗಳಲ್ಲಿ ಈ ಕಂಪನದ ಅನುಭವ ಆಗಿದೆ. ಈ ಬಗ್ಗೆ ಕರಿಕೆ ಗ್ಲೋಬಲ್ ಅಕಾಡೆಮಿ ವಾಟ್ಸಪ್ ಗ್ರೂಪ್ ನ ಸದಸ್ಯರೊಬ್ಬರು ನ್ಯೂಸ್ ನಾಟೌಟ್ ಗೆ ಕರೆ ಮಾಡಿ ಭೂಕಂಪದ ಅನುಭವ ಹಂಚಿಕೊಂಡಿದ್ದಾರೆ. ಅಲ್ಲದೆ ಸಂಪಾಜೆ ಗ್ರಾಮ ಪಂಚಾಯತ್ ವಾಟ್ಸಪ್ ಗ್ರೂಪ್ ನಲ್ಲಿ ಭೂಕಂಪದ ಬಗ್ಗೆ ಹಲವರು ತಮ್ಮ ಅನುಭವ ಹೇಳಿಕೊಂಡಿದ್ದಾರೆ. ಈ ಬಗ್ಗೆ ಚೆಂಬು ಗ್ರಾಮದಿಂದ ವ್ಯಕ್ತಿಯೊಬ್ಬರು ನ್ಯೂಸ್ ನಾಟೌಟ್ ಗೆ ಕರೆ ಮಾಡಿ ಇಂತಹ ಶಬ್ಧ ಇಂದೆಂದೂ ಆಗಿರಲಿಲ್ಲ. ಇದೇ ಮೊದಲ ಸಲ ಭಯಂಕರ ಶಬ್ಧ ಕೇಳಿಸಿತು. ನಾವೆಲ್ಲ ಗಾಬರಿಯಾಗಿದ್ದೇವೆ ಎಂದು ತಿಳಿಸಿದ್ದಾರೆ.

Related posts

ಕ್ರಿಕೆಟ್‌ ದಿಗ್ಗಜ ಕನ್ನಡಿಗ ರಾಹುಲ್ ದ್ರಾವಿಡ್‌ ಬಗ್ಗೆ ವಿರಾಟ್ ಕೊಹ್ಲಿ ಭಾವನಾತ್ಮಕ ಟ್ವೀಟ್‌..! ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್‌ ಗೂ ಮೊದಲು ಕೋಚ್‌ ಬಗ್ಗೆ ಕೊಹ್ಲಿ ಹೇಳಿದ್ದೇನು?

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪುತ್ರಿಯ ವಿವಾಹ ಸಮಾರಂಭ ಹೇಗಿತ್ತು ಗೊತ್ತಾ?

ಆಧಾರ್ ಕಾರ್ಡ್ ಗೆ ಪಾನ್ ಲಿಂಕ್ ಮಾಡದಿದ್ದರೆ 2023ರ ನಂತರ ಪಾನ್ ಕಾರ್ಡ್ ರದ್ದು