ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪುತ್ರಿಯ ವಿವಾಹ ಸಮಾರಂಭ ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಸಂಭ್ರಮ ಸಡಗರದಿಂದ ಜರುಗಿತು. ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ನವದಂಪತಿಗಳು ಗೋಧೂಳಿ ಶುಭ ಮುಹೂರ್ತದಲ್ಲಿ ಹಸೆಮಣೆ ಏರಿದ್ರು. ಜೋಶಿ ಪುತ್ರಿ ಅರ್ಪಿತಾ ಹಾಗೂ ಹೃಷಿಕೇಶ ಮದುವೆ ಸಮಾರಂಭದಲ್ಲಿ ರಾಜ್ಯಪಾಲ ಥಾವರ ಚೆಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ. ಕೇಂದ್ರ ಸಚಿವ ಮೇಘವಾಲ್, ಯದುವೀರ ಒಡಯರ್. ಸಚಿವರಾದ ಆರ್ ಅಶೋಕ್. ಶಂಕರಪಾಟೀಲ ಮುನೇನಕೊಪ್ಪ, ಮಾಜಿ ಸಚಿವ ಜಗದೀಶ್ ಶೆಟ್ಟರ್,ಹಾಲಪ್ಪ ಆಚಾರ. ಮಾಜಿ ಸಂಸದ ಚಂದ್ರಪ್ಪ, ನೆಹರು ಓಲೇಕಾರ್. ಸೇರಿದಂತೆ ಹಲವು ಶಾಸಕರು ಸಚಿವರು ಭಾಗಿಯಾಗಿ ನೂತನ ದಂಪತಿಗಳಿಗೆ ಶುಭಾಶಯ ಕೋರಿದರು. ನಾಳೆ ಸಂಜೆ ನಡೆಯಲಿರುವ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಹಾಗೂ ರಾಜ್ಯ ನಾಯಕರ ದಂಡೆ ಹುಬ್ಬಳ್ಳಿಗೆ ಆಗಮಿಸಿದೆ.
previous post