ಕಾರ್ಕಳ: ರೋಟರಿ ವಲಯದ ಸಾಂಸ್ಕೃತಿಕ ಕಾರ್ಯಕ್ರಮ ಕಲಾವೈಭವ-2021 ಶಂಕರಪುರ ರೋಟರಿಯ ಆತಿಥ್ಯದಲ್ಲಿ ನಡೆಯಿತು. ರೋಟರಿ ಸಂಸ್ಥೆ ಕಾರ್ಕಳ ಕಾರ್ಯಕ್ರಮದ ಸರ್ವಶ್ರೇಷ್ಠ ತಂಡವಾಗಿ ಹೊರಬಂದಿದೆ. ಏಕವ್ಯಕ್ತಿ ಜಾನಪದ ಗೀತೆಯಲ್ಲಿ ರೋಟೇರಿಯನ್ ಶಿವಕುಮಾರ್ ಪ್ರಥಮ ,ಸಮೂಹ ಗಾನದಲ್ಲಿ ಪ್ರಥಮ, ಸಮೂಹ ಜಾನಪದ ನೃತ್ಯ ಪ್ರಥಮ, ಏಕವ್ಯಕ್ತಿ ನೃತ್ಯ ರೋಟೇರಿಯನ್ ರಮಿತಾ ಶೈಲೆಂದ್ರ ದ್ವಿತೀಯ, ಕಿರು ಪ್ರಹಸನ ದ್ವಿತೀಯ ಪ್ರಶಸ್ತಿಯನ್ನು ರೋಟರಿ ಕಾರ್ಕಳ ತಮ್ಮದಾಗಿಸಿ ಕೊಂಡಿರುತ್ತದೆ .ಮಾಜಿ ಜಿಲ್ಲಾ ಗವರ್ನರ್ ರೋಟೇರಿಯನ್ ಡಾಕ್ಟರ್ ಭರತೇಶ್ ಅಧಿರಜ್ ಪ್ರಶಸ್ತಿಯನ್ನು ರೋಟೇರಿಯನ್ ಸುರೇಶ್ ನಾಯಕ್ ಅಧ್ಯಕ್ಷರು ರೋಟರಿ ಸಂಸ್ಥೆ ಕಾರ್ಕಳ ಅವರಿಗೆ ಹಸ್ತಾಂತರಿಸಿದರು .ರೋಟೇರಿಯನ್ ಅರುಣ ಹೆಗಡೆ ಸಹಾಯಕ ಗವರ್ನರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.