ಕೊಡಗು

ದಂಪತಿ, ಮೂವರು ಮಕ್ಕಳಿದ್ದ ಕಾರನ್ನು ಮಗುಚಿ ಹಾಕಲು ಯತ್ನಿಸಿದ ಕಾಡಾನೆ.. ಕುಶಾಲನಗರ-ಮಡಿಕೇರಿ ಹೆದ್ದಾರಿಯಲ್ಲೇ ಘಟನೆ..!

745

ಮಡಿಕೇರಿ: ಕುಶಾಲನಗರದಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಕಾರಿನ ಮೇಲೆ ಕಾಡಾನೆಯೊಂದು ದಾಳಿ ಮಾಡಿರುವ ಘಟನೆ ಆನೆಕಾಡು ಎಂಬಲ್ಲಿ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಹಾಗೂ ಮೂವರು ಮಕ್ಕಳು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಪ್ರವಾಸಿತಾಣ ನಿಸರ್ಗಧಾಮ ವೀಕ್ಷಣೆಗೆ ಕುಶಾಲನಗರಕ್ಕೆ ತೆರಳಿದ್ದ ಕುಟುಂಬ ಮಡಿಕೇರಿ ಕಡೆಗೆ ಪ್ರಯಾಣ ಬೆಳೆಸಿತ್ತು. ರಾತ್ರಿ ಸುಮಾರು 8 ಗಂಟೆ ಹೊತ್ತಿನಲ್ಲಿ ಕಾಡಾನೆ ದಿಢೀರ್ ಆಗಿ ಹೆದ್ದಾರಿಯಲ್ಲಿ ಪ್ರತ್ಯಕ್ಷವಾಗಿದೆ. ಕಾರನ್ನು ನಿಧಾನವಾಗಿ ಚಲಾಯಿಸಲಾಯಿತ್ತಾದರೂ ಕಾಡಾನೆ ಸಮೀಪಕ್ಕೆ ಬಂದಾಗಿತ್ತು. ಮಡದಿ, ಮಕ್ಕಳು ಆತಂಕದಿಂದ ಜೋರಾಗಿ ಕಿರುಚಿಕೊಳ್ಳಲು ಆರಂಭಿಸಿದರು. ದೂರದಲ್ಲಿ ಬೈಕ್ ನಲ್ಲಿ ಬರುತ್ತಿದ್ದವರು ವೇಗವಾಗಿ ಬರುವಂತೆ ಸನ್ನೆ ಮಾಡಿದ್ದಾರೆ. ಅಷ್ಟೊತ್ತಿಗಾಗಲೇ ಕಾಡಾನೆ ತನ್ನ ದಂತದಿಂದ ಕಾರನ್ನು ಮಗುಚಲು ಯತ್ನಿಸಿದೆ. ಆದರೆ ಸುತ್ತಮುತ್ತಲಿದ್ದವರು ಆನೆಯ ಗಮನವನ್ನು ಬೇರೆಡೆಗೆ ಸೆಳೆದುದರಿಂದ ಇಡೀ ಕುಟುಂಬ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ.

See also  ದಿವಂಗತ ಕಳಗಿ ಬಾಲಚಂದ್ರ ಹುಟ್ಟುಹಬ್ಬ, ಸ್ಟೇಟಸ್ ಸಂಭ್ರಮ
  Ad Widget   Ad Widget   Ad Widget   Ad Widget   Ad Widget   Ad Widget   Ad Widget