ಕ್ರೈಂವೈರಲ್ ನ್ಯೂಸ್

ರಾಕೆಟ್‌ ಉಡಾವಣೆಗೊಂಡ ಬೆನ್ನಲ್ಲೇ ಭಾರಿ ಸ್ಫೋಟ..! ಈ ಘಟನೆ ನಡೆದದ್ದೆಲ್ಲಿ..? ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್: ಖಾಸಗಿ ಕಂಪನಿಯೊಂದು ಪ್ರಥಮ ಬಾರಿಗೆ ತಯಾರಿಸಿದ್ದ ರಾಕೆಟ್‌ ಉಡಾವಣೆಗೊಂಡ ಬೆನ್ನಲ್ಲೇ ಸ್ಫೋಟಗೊಂಡಿರುವ ಘಟನೆ ನಡೆದಿದ್ದು, ರಾಕೆಟ್‌ ಉಡಾವಣೆ ವಿಫಲವಾಗಿರುವ ದೃಶ್ಯವನ್ನು ಎನ್‌ ಎಚ್‌ ಕೆ ಬ್ರಾಡ್‌ ಕಾಸ್ಟ್‌ ಪ್ರಸಾರ ಮಾಡಿದೆ. ಈ ಘಟನೆ ಜಪಾನ್‌ ನಲ್ಲಿ ನಡೆದಿದೆ.

ಟೋಕಿಯೋ ಮೂಲದ‌ ಮೊದಲ ಖಾಸಗಿ ಸ್ಟಾರ್ಟ್‌ ಅಪ್‌ ಸ್ಪೇಸ್‌ ಒನ್ ಸಂಸ್ಥೆ ಯಶಸ್ವಿಯಾಗಿ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಗುರಿ ಹೊಂದಿತ್ತು. 18 ಮೀಟರ್‌ (60ಅಡಿ) ಎತ್ತರದ ಘನ ಇಂಧನ ಕೈರೋಸ್‌ ರಾಕೆಟ್‌ ಪಶ್ಚಿಮ ಜಪಾನ್‌ ನ ವಕಯಾಮಾ ಪ್ರಿಫೆಕ್ಚರ್‌ ನಲ್ಲಿರುವ ಸ್ಟಾರ್ಟ್‌ ಅಪ್‌ ನ ಸ್ವಂತ ಲಾಂಚ್‌ ಪ್ಯಾಡ್‌ ನಲ್ಲಿ ಪರೀಕ್ಷಾರ್ಥ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು.

ಆದರೆ ಉಡಾವಣೆಗೊಂಡ ಬೆನ್ನಲ್ಲೇ ರಾಕೆಟ್‌ ಸ್ಫೋಟಗೊಂಡು ಬೆಂಕಿ ಉಂಡೆಯಂತೆ ಉರಿದು ಲಾಂಚ್‌ ಪ್ಯಾಡ್‌ ಸುತ್ತಲೂ ದಟ್ಟ ಹೊಗೆ ಆವರಿಸಿಕೊಂಡಿತ್ತು ಎಂದು ವರದಿ ವಿವರಿಸಿದೆ. ಸುಟ್ಟು ಕರಕಲಾದ ಅವಶೇಷ ಸುತ್ತಲಿನ ಪರ್ವತ ಪ್ರದೇಶದ ಇಳಿಜಾರಿನಲ್ಲಿ ಉದುರಿ ಬಿದ್ದಿರುವುದಾಗಿ ವರದಿ ತಿಳಿಸಿದೆ. ರಾಕೆಟ್‌ ಉಡ್ಡಾಯನ ಸಂದರ್ಭದಲ್ಲಿ ಸ್ಫೋಟಗೊಂಡ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು. ನಮ್ಮ ವೈಫಲ್ಯತೆಯಿಂದ ಜಪಾನ್‌ ನ ಸೆಟಲೈಟ್‌ ಉಡಾವಣೆ ಮಾರುಕಟ್ಟೆ ಮೇಲೆ ಪರಿಣಾಮ ಬೀರುವಂತಾಗಿದೆ ಎಂದು ಸ್ಪೇಸ್‌ ಒನ್‌ ಅಭಿಪ್ರಾಯವ್ಯಕ್ತಪಡಿಸಿದೆ ಎಂದು ವರದಿ ತಿಳಿಸಿದೆ.

Related posts

ದೇವಸ್ಥಾನದ ಬ್ಯಾನರ್ ನಲ್ಲಿ ದೇವಿಯ ಚಿತ್ರದ ಜೊತೆ ಮಿಯಾ ಖಲೀಫಾ ಫೋಟೋ..! ಧಾರ್ಮಿಕ ಉತ್ಸವದಲ್ಲಿ ಏನಿದು ಎಡವಟ್ಟು..?

“ಕಾವೇರಿ ವಿಚಾರದಲ್ಲಿ ಮೋದಿ ಜೊತೆಗೆ ನಾನು ಮಾತನಾಡಲ್ಲ” ಮಾಜಿ ಪ್ರಧಾನಿ ಹೀಗೆ ಹೇಳುವುದರ ಹಿಂದಿದೆ ಆ ಒಂದು ಕಾರಣ..!

ಕತ್ತೆಯನ್ನು ಕದ್ದು ಸಿಕ್ಕಿಬಿದ್ದ ಕಾಂಗ್ರೆಸ್ ನಾಯಕ..!