ಕ್ರೈಂ

ಕತ್ತೆಯನ್ನು ಕದ್ದು ಸಿಕ್ಕಿಬಿದ್ದ ಕಾಂಗ್ರೆಸ್ ನಾಯಕ..!

667

ಕತ್ತೆಗಳನ್ನು ಕದ್ದ ಆರೋಪದಡಿ ಕಾಂಗ್ರೆಸ್​ ನಾಯಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ತೆಲಂಗಾಣ ಎನ್​ಎಸ್​ಯುಐ (ಕಾಂಗ್ರೆಸ್​​ನ ಸ್ಟುಡೆಂಟ್​ ಯೂನಿಯನ್​) ಅಧ್ಯಕ್ಷ ವೆಂಕಟ್​ ಬಲ್ಮೂರ್​ ಎಂಬುವರು ಬಂಧಿತರು. ತೆಲಂಗಾಣ ಸಿಎಂ ಕೆ.ಚಂದ್ರಶೇಖರ್​ ರಾವ್ ಹುಟ್ಟುಹಬ್ಬದ ದಿನ ಇವರು ಕತ್ತೆಯೊಂದಿಗೆ ಕೆಸಿಆರ್​ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅದರ ಬೆನ್ನಲ್ಲೇ ಇಂಥದ್ದೊಂದು ದೂರು ದಾಖಲಾಗಿದೆ.  ವೆಂಕಟ್​ ಬಲ್ಮೂರ್​ ಜತೆಗೆ ಇನ್ನಿತರ ಕೆಲವರ ಹೆಸರನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಅವರೆಲ್ಲರೂ ಪರಾರಿಯಾಗಿದ್ದಾರೆ.

ತೆಲಂಗಾಣ ಎನ್​ಎಸ್​ಯುಐ ವೆಂಕಟ್​ ಬಲ್ಮೂರ್ ವಿರುದ್ಧ ಜಮ್ಮಿಕುಂಟಾ ಅಧ್ಯಕ್ಷ ತಂಗುಟೋರಿ ರಾಜ್​​ಕುಮಾರ್ ಎಂಬುವರು ದೂರು ದಾಖಲಿಸಿದ್ದರು. ನನ್ನ ಕತ್ತೆಗಳನ್ನು ಕದ್ದಿದ್ದಾರೆ ಎಂದು ವೆಂಕಟ್​ ಬಲ್ಮೂರು ಸೇರಿ ಏಳು ಮಂದಿಯ ವಿರುದ್ಧ ದೂರು ಕೊಟ್ಟಿದ್ದರು. ಕಾನೂನುಬಾಹಿರ ಸಭೆ, ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ, ಕಳ್ಳತನ ಮತ್ತು ಪ್ರಾಣಿಗಳ ಮೇಲೆ ಕ್ರೌರ್ಯ ತೋರಿದ ಆರೋಪದಡಿ  ಇವರ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ ಎಂದು  ಪೊಲೀಸರು ಮಾಹಿತಿ ನೀಡಿದ್ದಾರೆ.

See also  ‘ಫ್ರೀ ಪ್ಯಾಲೆಸ್ತೀನ್’ ಎಂದು ಕೂಗುತ್ತಾ ಸಾರ್ವಜನಿಕರ ಮೇಲೆ ಪೆಟ್ರೋಲ್ ಬಾಂಬ್ ಎಸೆದ ವ್ಯಕ್ತಿ..! 6 ಜನ ಆಸ್ಪತ್ರೆಗೆ ದಾಖಲು
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget