ದೇಶ-ಪ್ರಪಂಚವೈರಲ್ ನ್ಯೂಸ್ಸಾಧಕರ ವೇದಿಕೆ

ಅಯೋಧ್ಯೆ ರಾಮಮಂದಿರಕ್ಕೆ ಮತ್ತೊಬ್ಬ ಕರ್ನಾಟಕದ ಶಿಲ್ಪಿಯ ಮೂರ್ತಿ ಆಯ್ಕೆ, ಗಣೇಶನ ಶಿಲ್ಪಕ್ಕೆ ದೇಗುಲದಲ್ಲಿ ವಿಶೇಷ ಸ್ಥಾನ

ನ್ಯೂಸ್ ನಾಟೌಟ್ : ಮೈಸೂರು ಮೂಲದ ಅರುಣ್‌ ಯೋಗಿರಾಜ್‌ ಕೆತ್ತಿದ ಬಾಲರಾಮನ ಮೂರ್ತಿ ಅಯೋಧ್ಯೆ ರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಟಾಪನೆಯಾಗಿದ್ದು, ಇದರ ಬೆನ್ನಲ್ಲೇ ಮತ್ತೊಬ್ಬ ಕನ್ನಡಿಗ ಕೆತ್ತಿದ ಮತ್ತೊಂದು ಮೂರ್ತಿಗೂ ಅಯೋಧ್ಯೆ ದೇಗುಲದಲ್ಲಿ ಸ್ಥಾನ ಸಿಕ್ಕಿದೆ.

ಉತ್ತರ ಕನ್ನಡದ ಹೊನ್ನಾವರ ಮೂಲದ ಯುವ ಶಿಲ್ಪಿ ವಿನಾಯಕ ಗೌಡ ಕೆಕ್ಕಾರ ಎಂಬವರು ಕೆತ್ತಿರುವ ಗಣಪತಿ ಪ್ರತಿಮೆ ಜನವರಿ 22ರಂದು ಪ್ರಾಣ ಪ್ರತಿಷ್ಠಾ ಸಂದರ್ಭದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ಸ್ಥಾಪನೆಗೊಳ್ಳಲಿದೆ ಎಮದು ವರದಿ ತಿಳಿಸಿದೆ.

ಮಂದಿರದ ರಂಗಮಂಟಪವನ್ನು ರಚಿಸುವ ಹೊಣೆಯನ್ನು ಇವರಿದ್ದ ತಂಡಕ್ಕೆ ವಹಿಸಲಾಗಿತ್ತು. ಅದರಲ್ಲಿ ಇವರು ರಚಿಸಿದ ಗಣಪತಿ ಮೂರ್ತಿ ಹಾಗೂ ಕೆತ್ತನೆಗಳು ಸೇರಿವೆ ಎನ್ನಲಾಗಿದೆ.

ಹೊನ್ನಾವರದ ಯುವ ಶಿಲ್ಪಿ ವಿನಾಯಕ ಗೌಡ ಕೆಕ್ಕಾರಗೆ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲು ಗಣಪತಿ ವಿಗ್ರಹವನ್ನು ಕೆತ್ತುವ ಜವಾಬ್ದಾರಿಯನ್ನು ನೀಡಲಾಗಿದ್ದು, ಈ ಶಿಲ್ಪ ಶೀಘ್ರದಲ್ಲೇ ಮಂದಿರದಲ್ಲಿ ಪ್ರತಿಷ್ಟಾಪನೆಗೊಳ್ಳಲಿದೆ ಎಂದು ವರದಿ ತಿಳಿಸಿದೆ.

ಸಾಧಾರಣ ಕುಟುಂಬದಲ್ಲಿ ಜನಿಸಿದ ವಿನಾಯಕ ಗೌಡ ಅವರು, ಹೆಚ್ಚು ಶಿಕ್ಷಣ ಪಡೆದಿಲ್ಲ. ಕರ್ನಾಟಕದ ಐವರು ಕಲಾವಿದರು ಈ ತಂಡದಲ್ಲಿದ್ದರು ಎನ್ನಲಾಗಿದೆ.

https://newsnotout.com/2024/01/school-college-leave-dk-rama/

Related posts

ಕರ್ನಾಟಕ-ಆಂಧ್ರ ಬಸ್‌ ಗಳ ಓವರ್‌ ಟೆಕ್ ಭರದಲ್ಲಿ 8 ವರ್ಷದ ಬಾಲಕಿ ಸಾವು..! ಆಕೆಯ ಸೋದರ ಮಾವನೂ ದುರಂತ ಅಂತ್ಯ..!

ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್‌..! ಜಾತಿ ನಿಂದನೆ ಆರೋಪ ಎದುರಿಸುತ್ತಿರುವ ಶಾಸಕನಿಗೆ ಮತ್ತೊಂದು ಶಾಕ್..!

ಸುಬ್ರಹ್ಮಣ್ಯ: ವಿವಾಹಿತ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡು ಬ್ಲ್ಯಾಕ್ ಮೇಲ್..! ನಗ್ನ ವಿಡಿಯೋ ಚಿತ್ರೀಕರಿಸಿ ಲಕ್ಷ..ಲಕ್ಷಕ್ಕೆ ಬೇಡಿಕೆ ಇಟ್ಟವ ಸಿಕ್ಕಿಬಿದ್ದಿದ್ದು ಹೇಗೆ..?