ಕ್ರೈಂದೇಶ-ವಿದೇಶ

ಮದುವೆ ಸಂಭ್ರಮದ ನಡುವೆ ಕಾರ್ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ..! 7 ಜನರ ಮೇಲೆ ಕಾರು ಹತ್ತಿಸಿ ಆತ ಪರಾರಿ, ಓರ್ವ ಸಾವು..!

ನ್ಯೂಸ್‌ ನಾಟೌಟ್‌: ಮದುವೆ ಸಂಭ್ರಮದಲ್ಲಿ ಪಟಾಕಿ ಸಿಡಿಸುವ ವಿಚಾರದಲ್ಲಿ ಜಗಳ ಉಂಟಾಗಿ ಅನಾಹುತ ನಡೆದ ಘಟನೆ ರಾಜಸ್ಥಾನದ ದೌಸಾದಲ್ಲಿ ನಡೆದಿದೆ.
ವರನ ಕಡೆಯ ಮದುವೆ ದಿಬ್ಬಣ ವಧುವಿನ ಗ್ರಾಮಕ್ಕೆ ಬಂದಿದೆ. ಈ ವೇಳೆ ವಧುವಿನ ಕಡೆಯವರು ಮದುವೆ ನಡೆಯುತ್ತಿರುವ ಸ್ಥಳದಲ್ಲಿ ಸಂಭ್ರಮದಿಂದ ಪಟಾಕಿ ಸಿಡಿಸಿದ್ದಾರೆ.

ವರನ ಕಡೆಯ ವ್ಯಕ್ತಿಯೊಬ್ಬ ತನ್ನ ಕಾರು ಪಾರ್ಕ್‌ ಮಾಡುವ ಜಾಗದಲ್ಲಿ ಪಟಾಕಿ ಸಿಡಿಸುತ್ತಿದ್ದ ವಧುವಿನ ಕಡೆಯವರ ಬಳಿ ವಾಗ್ವಾದಕ್ಕೆ ಇಳಿದಿದ್ದಾನೆ. ಮೊದಲಿಗೆ ಮಾತಿನಿಂದ ಆರಂಭವಾದ ಜಗಳ ಆ ಬಳಿಕ ದೈಹಿಕವಾಗಿ ಹಲ್ಲೆಯವರೆಗೂ ಹೋಗಿದೆ. ಪರಿಣಾಮ ವರನ ಕಡೆಯ ವ್ಯಕ್ತಿ ಸಿಟ್ಟಿನಲ್ಲಿ ಕಾರಿಗೆ ಹತ್ತಿ ಪಟಾಕಿ ಸಿಡಿಸುತ್ತಿದ್ದ ವ್ಯಕ್ತಿಗಳ ಮೇಲೆ ಕಾರು ಹರಿಸಿದ್ದಾನೆ. ಘಟನೆಯಲ್ಲಿ 7 ಮಂದಿಗೆ ತೀವ್ರ ಗಾಯಗಳಾಗಿವೆ. ಗಾಯಗೊಂಡವರು ಜೈಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಸದ್ಯ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ತಂಡ ರಚಿಸಿ ಹುಡುಕಾಟ ನಡೆಸುತ್ತಿದ್ದಾರೆ.

Click

https://newsnotout.com/2024/11/indian-airline-all-time-record-by-travelling-5-lakh-people-in-a-day/
https://newsnotout.com/2024/11/bpl-cacellation-process-and-trasfer-to-apl-kannada-news-d/
https://newsnotout.com/2024/11/bjp-and-congress-viral-news-praghallad-joshi-v/
https://newsnotout.com/2024/11/mangaluru-ullala-3-girls-issue-manager-and-owner-arrested-kananda-news-d/
https://newsnotout.com/2024/11/lady-make-a-complaint-on-man-who-met-in-dating-app-kannad-anews-d/
https://newsnotout.com/2024/11/children-cyber-crime-kannada-news-viral-news-police-investigation/
https://newsnotout.com/2024/11/student-injured-by-teacher-kannada-news-viral-news-d/

Related posts

ಮತಾಂತರವಾಗಿದಿದ್ದರೆ ಅತ್ಯಾಚಾರದ ಬೆದರಿಕೆ: ಹಿಂದೂ ಯುವತಿಗೆ ಅನ್ಯಕೋಮಿನ ಯುವಕನ ಕಿರುಕುಳ

ಪಟ್ಟಣಗೆರೆ ಶೆಡ್ ಮಾಲೀಕರಿಗೆ ನೋಟಿಸ್ ನೀಡಿದ ಬಿಬಿಎಂಪಿ..! ದರ್ಶನ್ ಕೇಸ್ ಬಳಿಕ ಶೆಡ್ ಮಾಲೀಕನಿಗೆ ಮತ್ತೊಂದು ಶಾಕ್..!

ಉಪ್ಪಿನಂಗಡಿ: ಲಾರಿ ಚಕ್ರ ಸ್ಫೋಟ, ಬೆಂಕಿ ಹತ್ತಿಕೊಂಡು ಸುಟ್ಟು ಕರಕಲಾದ ಲಾರಿ