ಕ್ರೈಂ

ಮತಾಂತರವಾಗಿದಿದ್ದರೆ ಅತ್ಯಾಚಾರದ ಬೆದರಿಕೆ: ಹಿಂದೂ ಯುವತಿಗೆ ಅನ್ಯಕೋಮಿನ ಯುವಕನ ಕಿರುಕುಳ

879

ಮಂಗಳೂರು: ಇಲ್ಲಿನ ಹೊರವಲಯದ ಬೈಕಂಪಾಡಿಯ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವಕ ತಾನು ಹಿಂದೂ ಯುವಕ ಎಂದು ನಂಬಿಸಿ ಯುವತಿಯೋರ್ವಗಳಿಗೆ ಮೋಸ ಮಾಡಿರುವ ಘಟನೆ ನಡೆದಿದೆ. ಅಲ್ಲದೆ ವಿಷಯ ಗೊತ್ತಾದ ನಂತರ ಇಸ್ಲಾಂಗೆ ಮತಾಂತರವಾಗು ಎಂದು ಆಕೆಯನ್ನು ಬಲವಂತ ಪಡಿಸುತ್ತಿದ್ದ. ಇದಕ್ಕೆ ಹುಡುಗಿ ಒಪ್ಪಿರಲಿಲ್ಲ. ಆಗ ಆಕೆಗೆ ಅತ್ಯಾಚಾರದ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ. ಸದ್ಯ ಸುರತ್ಕಲ್ ಠಾಣಾ ಪೊಲೀಸರು ಆರೋಪಿ ಇಬ್ರಾಹಿಂ ಎಂಬ ಮುಸ್ಲಿಂ ಯುವಕನ ವಿರುದ್ಧ ದೂರು ದಾಖಲಿಸಿದ್ದಾರೆ.

ಮಂಗಳೂರು ಹೊರವಲಯದ ಬೈಕಂಪಾಡಿಯ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವಕ ತಾನು ಹಿಂದೂ ಯುವಕ ಎಂದು ನಂಬಿಸಿದ್ದ. ಸದ್ಯ ಯುವತಿ ನೀಡಿರುವ ದೂರಿನಂತೆ ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ಯುವತಿ ರಾಮ್ ಸೇನಾ ಕರ್ನಾಟಕ ಸಂಘಟನೆಯನ್ನು ಸಂಪರ್ಕಿಸಿ ಅನ್ಯಾಯದ ಬಗ್ಗೆ ಹೇಳಿಕೊಂಡಿದ್ದು, ಸಂತ್ರಸ್ತ ಯುವತಿಗೆ ನ್ಯಾಯ ಕೊಡಿಸಲು ರಾಮ್ ಸೇನಾ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಸ್ಥಳೀಯರು ನೆರವಾಗಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಮ್ ಸೇನಾ ದ. ಕ. ಜಿಲ್ಲಾಧ್ಯಕ್ಷರಾದ ಕಿರಣ್ ಅಮೀನ್ ಉರ್ವಸ್ಟೋರ್, ಜಿಲ್ಲೆಯಲ್ಲಿ ಇಂತಹ ಕೃತ್ಯಗಳು ಹೆಚ್ಚಾಗಿ ಕಂಡುಬರುತ್ತಿದ್ದು ಪೊಲೀಸ್ ಇಲಾಖೆಯು ಇದರ ವಿರುದ್ಧ ಗಮನಹರಿಸಬೇಕು ಹಾಗೂ ಅನ್ಯಕೋಮಿನ ಯುವಕರೇ ಪದೇ ಪದೇ ಹಿಂದೂ ಸಮಾಜವನ್ನು ಕೆಣಕುವ ದುಸ್ಸಾಹಸ ಮಾಡದಿರಿ. ಮುಂದೆ ಬರುವ ಎಲ್ಲಾ ಸಮಸ್ಯೆಗಳನ್ನು ನೀವೇ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

See also  ವೇಶ್ಯಾವಾಟಿಕೆ ದಂಧೆಗೆ ಹೆಣ್ಣು ಮಕ್ಕಳಿಗೆ ಬ್ಲ್ಯಾಕ್ ಮೇಲ್‌: ಕಿಂಗ್ ಪಿನ್ ಹೆಂಡತಿ, ಗಂಡ ಅರೆಸ್ಟ್
  Ad Widget   Ad Widget   Ad Widget   Ad Widget   Ad Widget   Ad Widget   Ad Widget