ಕ್ರೈಂ

ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದ ಸುಳ್ಯದ ಖತರ್ನಾಕ್ ಕಳ್ಳ, ಈಗ ಪೊಲೀಸರ ಅತಿಥಿ

ಸುಳ್ಯ: ರೈಲು ಪ್ರಯಾಣಿಕರ ಬೆಲೆ ಬಾಳುವ ವಸ್ತುಗಳನ್ನು ಕದಿಯುತ್ತಿದ್ದ ಸುಳ್ಯದ ಖತರ್ನಾಕ್ ಕಳ್ಳ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಮಂಗಳೂರು – ಬೆಂಗಳೂರು ರೈಲಿನಲ್ಲಿ ಸಂಚರಿಸುತ್ತಿರುವ ಯಾತ್ರಿಕರ ಮೊಬೈಲ್ ಫೋನ್, ಲೇಡೀಸ್ ಬ್ಯಾಗ್ ಕಳವುಗೈಯುತ್ತಿದ್ದ ಆರೋಪಿ ಸುಳ್ಯದ ಯುವಕನನ್ನು ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮಂಗಳೂರು – ಬೆಂಗಳೂರು ಸಂಚರಿಸುವ ರೈಲಿನಿಂದ ಸುಳ್ಯದ ಕಲ್ಲುಮುಟ್ಲು ನಿವಾಸಿ 19 ವರ್ಷದ ಯುವಕ ಅಬ್ದುಲ್ ಅಜೀಜ್ ಎಂಬುವವನು ಮಂಗಳೂರು ರೈಲ್ವೆ ಪೊಲೀಸರು ಬಂದಿಸಿರುವುದಾಗಿ ತಿಳಿದುಬಂದಿದೆ.

ಪ್ರಯಾಣಿಕರು ನಿದ್ರೆಯಲ್ಲಿರುವ ಸಂದರ್ಭದಲ್ಲಿ ಕಳವುಗೈಯುತ್ತಿದ್ದ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ. ಆರೋಪಿಯಿಂದ ಸುಮಾರು 11 ಮೊಬೈಲ್ ಫೋನ್, ಒಂದು ಟ್ಯಾಬ್‌, ಒಂದು ವ್ಯಾನಿಟಿ ಬ್ಯಾಗ್, ಪಾಸ್ ಪೋರ್ಟ್ ದಾಖಲೆಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

Related posts

ಮಸೀದಿ ಸರ್ವೇಗೆ ತೀವ್ರ ವಿರೋಧ, ಹಿಂಸಾಚಾರ..! ಘರ್ಷಣೆಯಲ್ಲಿ 3 ಮಂದಿ ಸಾವು, ಹಲವು ಪೊಲೀಸರಿಗೆ ಗಾಯ..!

ಸಂಪಾಜೆ: ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಅವಘಡ..! ಸುಳ್ಯ ಅರಣ್ಯಾಧಿಕಾರಿ ಹೇಳಿದ್ದೇನು..?

ಜಲಾಂತರ್ಗಾಮಿ ನೌಕೆಗೆ ಡಿಕ್ಕಿ ಹೊಡೆದ 13 ಮಂದಿ ಇದ್ದ ಭಾರತೀಯ ಮೀನುಗಾರಿಕಾ ಹಡಗು..! ಇಬ್ಬರು ನಾಪತ್ತೆ..!