ಕ್ರೈಂವೈರಲ್ ನ್ಯೂಸ್

ತುರ್ತು ಭೇಟಿಗೆ ಮನವಿ ಮಾಡಿದ ದರ್ಶನ್..! ನಾಳೆಯೇ(ಸೆ.10) ಬಳ್ಳಾರಿ ​ ಜೈಲಿಗೆ ಬರಲಿದ್ದಾರೆ ದರ್ಶನ್ ತಾಯಿ ಮತ್ತು ಪತ್ನಿ..!

ನ್ಯೂಸ್‌ ನಾಟೌಟ್‌: ದರ್ಶನ್​ ವಿರುದ್ಧ ನೂರಾರು ಸಾಕ್ಷಿಗಳು ಪೊಲೀಸರಿಗೆ ಸಿಕ್ಕಿವೆ. ಚಾರ್ಜ್​ಶೀಟ್​ನಲ್ಲಿನ ವಿವರಗಳು ನಿಜಕ್ಕೂ ಶಾಕಿಂಗ್​ ಆಗಿವೆ. ಬೆಂಗಳೂರಿನಲ್ಲಿ ಚಾರ್ಜ್​ಶೀಟ್​ ಸಲ್ಲಿಕೆ ಆಗುತ್ತಿದ್ದಂತೆಯೇ ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ಕುಟುಂಬದವರ ತುರ್ತು ಭೇಟಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಫ್ಯಾಮಿಲಿ ಜೊತೆ ಮಾತನಾಡಲು ಕರೆದಿರಬಹುದು ಎನ್ನಲಾಗಿದೆ. ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ಪ್ರಿಸನ್​ ಕಾಲ್​ ಸಿಸ್ಟಮ್​ ಮೂಲಕ ಕುಟುಂಬದವರಿಗೆ ದೂರವಾಣಿ ಕರೆ ಮಾಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಜೊತೆ ಅವರು 5 ನಿಮಿಷಗಳ ಕಾಲ ಮಾತನಾಡಿದ್ದಾರೆ. ಮುಂದಿನ ಕಾನೂನು ಹೋರಾಟದ ಬಗ್ಗೆಯೇ ಪತ್ನಿ ಜೊತೆ ಅವರು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಗಿದಿದೆ. 3991 ಪುಟಗಳು ಇರುವ ಜಾರ್ಜ್​ಶೀಟ್​ ಸಲ್ಲಿಕೆ ಮಾಡಲಾಗಿದೆ. ಆರೋಪಗಳು ಗಂಭೀರ ಆಗಿರುವುದರಿಂದ ದರ್ಶನ್​ಗೆ ಜಾಮೀನು ಸಿಗುವುದು ಕಷ್ಟ ಇದೆ. ಮುಂದಿನ ಕಾನೂನು ಹೋರಾಟದ ಬಗ್ಗೆ ಕೇವಲ 5 ನಿಮಿಷ ಫೋನ್​ ಕಾಲ್​ನಲ್ಲಿ ಮಾತನಾಡಲು ದರ್ಶನ್​ಗೆ ಸಾಧ್ಯವಾಗಿಲ್ಲ. ಆದ್ದರಿಂದ ಪತ್ನಿ ಮತ್ತು ತಾಯಿ ಜೊತೆ ನೇರವಾಗಿ ಮಾತನಾಡಲು ಅವರು ತೀರ್ಮಾನಿಸಿದ್ದಾರೆ.

ನಾಳೆಯೇ (ಸೆಪ್ಟೆಂಬರ್​ 11) ಜೈಲಿಗೆ ಬರುವಂತೆ ಪತ್ನಿಗೆ ದರ್ಶನ್​ ತಿಳಿಸಿದ್ದಾರೆ ಎನ್ನಲಾಗಿದೆ. ಪತ್ನಿ ವಿಜಯಲಕ್ಷ್ಮಿ ಮತ್ತು ತಾಯಿ ಮೀನಾ ಕೂಡ ಬರುವುದಾಗಿ ಮಾಹಿತಿ ನೀಡಿದ್ದಾರೆ.

Click

https://newsnotout.com/2024/09/darshan-thugudeepa-charge-sheet-kannada-news-highcourt-kannada-news/
https://newsnotout.com/2024/09/kananda-news-viral-news-video-cctv-fixed-on-the-doubter-head/
https://newsnotout.com/2024/09/darshan-thugudeepa-kannada-news-charge-sheet-leakage-bengaluru/
https://newsnotout.com/2024/09/iphone-16-and-pro-released-kannada-news-viral-news-technology/
https://newsnotout.com/2024/09/darshan-kannada-news-charge-sheet-kannada-news-shubha-poonja-and-ragini/#google_vignette
https://newsnotout.com/2024/09/railway-incident-kannada-news-gas-cylinder-kannada-news/
https://newsnotout.com/2024/09/rameshwaram-cafe-kannada-news-viral-news-nia-case-court/

Related posts

ಸುಳ್ಯ: ಬೇಂಗಮಲೆ ಬಳಿ ಸರಣಿ ಅಪಘಾತ, ಇನ್ನೋವಾ, ನೆಕ್ಸಾನ್ , ಟಿಪ್ಪರ್ ನಡುವೆ ಪರಸ್ಪರ ಅವಘಡ ಸಂಭವಿಸಿದ್ದು ಹೇಗೆ..?

ಗದ್ದೆಗೆ ದೀಪದ ಬೆಳಕು ತೋರಿಸಲು ಹೋಗಿದ್ದ ಯುವಕನಿಗೆ ವಿಷ ಜಂತು ಕಡಿದು ಸಾವು

ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡ್ಗಿಚ್ಚು..! 31 ಸ್ಥಳಗಳಿಗೆ ಹಬ್ಬಿದ ಬೆಂಕಿ..!