ಕ್ರೈಂ

ಗದ್ದೆಗೆ ದೀಪದ ಬೆಳಕು ತೋರಿಸಲು ಹೋಗಿದ್ದ ಯುವಕನಿಗೆ ವಿಷ ಜಂತು ಕಡಿದು ಸಾವು

654

ಕಾಪು: ದೀಪಾವಳಿ ಹಬ್ಬಕ್ಕಾಗಿ ಗದ್ದೆಗೆ ದೀಪದ ಬೆಳಕು ತೋರಿಸಲು ಗದ್ದೆಗೆ ಹೋಗಿದ್ದ ಯುವಕನಿಗೆ ವಿಷ ಜಂತು ಕಡಿದು ಮೃತಪಟ್ಟ ಘಟನೆ ಕಾಪುವಿನಲ್ಲಿ  ನಡೆದಿದೆ.

ಕಾಪು ಕಲ್ಯ ನಿವಾಸಿ ರೋಹಿತ್ ಕುಮಾರ್ (26) ಮೃತ ಯುವಕ ಎಂದು ತಿಳಿದು ಬಂದಿದೆ. ಬಲೀಂದ್ರ ಪೂಜೆಯ ಪ್ರಯುಕ್ತ ಗುರುವಾರ ರಾತ್ರಿ ರೋಹಿತ್ ಕುಮಾರ್ ಮತ್ತು ಸಹೋದರರು ಗದ್ದೆಗೆ ತೆರಳಿದ್ದು, ಈ ಸಂದರ್ಭದಲ್ಲಿ ಅವರಿಗೆ ವಿಷ ಜಂತು ಕಡಿದಿತ್ತು. ಕುಟುಂಬಸ್ಥರು ನಾಟಿ ವೈದ್ಯರ ಬಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಆ ಬಳಿಕ ಚೇತರಿಸಿಕೊಂಡಿದ್ದ ರೋಹಿತ್ ಅವರಿಗೆ ಶುಕ್ರವಾರ ಸಂಜೆ ತೀವ್ರ ಅಸ್ವಸ್ಥಗೊಂಡಿದ್ದು ತಕ್ಷಣ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ವರದಿಯಾಗಿದೆ.

See also  ವಾಕಿಂಗ್ ಹೋಗುತ್ತಿದ್ದ ರಾಜಕೀಯ ನಾಯಕನ ಮೇಲೆ ಗುಂಡಿನ ಸುರಿಮಳೆ, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು
  Ad Widget   Ad Widget   Ad Widget   Ad Widget   Ad Widget