ದೇಶ-ಪ್ರಪಂಚ

9 ಮಹಿಳೆಯರು ಸೇರಿ 44 ಮಂದಿ ನಕ್ಸಲರು ಪೊಲೀಸರಿಗೆ ಶರಣು

ಸುಕ್ಮಾ: ಚತ್ತೀಸಗಡದ ಸುಕ್ಮಾ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸಕ್ರಿಯರಾಗಿದ್ದ 44 ಮಂದಿ ನಕ್ಸಲರು ಶರಣಾಗಿದ್ದಾರೆ. ಇವರಲ್ಲಿ 9 ಮಹಿಳೆಯರು ಸೇರಿದ್ದಾರೆ.

ಕೆಳ ಹಂತದ ಕೇಡರ್ ಗಳಲ್ಲಿ ಕೆಲಸ ಮಾಡುತ್ತಿದ್ದ ಇವರು ಇಲ್ಲಿನ  ಚಿಂತಾಲ್​ನರ್​, ಕಿಸ್ಟಾರಾಮ್ ಮತ್ತು ಬೇಜಿ ಪ್ರದೇಶಗಳಲ್ಲಿ ಕಾರ್ಯಾಚರಣೆ ಮಾಡುತ್ತಿದ್ದರು ಎಂದು ಸುಕ್ಮಾ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ಸುನಿಲ್​ ಶರ್ಮಾ ತಿಳಿಸಿದ್ದಾರೆ. ಶರಣಾಗಿರುವ ನಕ್ಸಲರು ಸುಕ್ಮಾ ಜಿಲ್ಲೆಯ ಕರಿಗುಂಡಮ್​ ಹಳ್ಳಿಯಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ಪೊಲೀಸ್ ಕ್ಯಾಂಪ್ ನಲ್ಲಿ ಬೀಡುಬಿಟ್ಟಿದ್ದಾರೆ. ಅವರಿಗೆ ಆಹಾರ, ವಸತಿ ಸೌಕರ್ಯ ಕಲ್ಪಿಸಲಾಗಿದೆ ಎಂದು ಶರ್ಮಾ ಹೇಳಿದ್ದಾರೆ. 

Related posts

ಹೆಣ್ಣು ಸಿಗುತ್ತಿಲ್ಲವೆಂದು ಬೇಸರಗೊಂಡ ಯುವಕ ವಿಷಸೇವಿಸಿ ಆತ್ಮಹತ್ಯೆ,ಹುಡುಗಿ ಸಿಗದೆ ಇರಲು ಕಾರಣವೇನು?

ರೈಫಲ್‌ ಜೊತೆ ಬಾರ್‌ ಗೆ ನುಗ್ಗಿದ ಅಪರಿಚಿತ..! ಡಿಜೆ ಜಾಕಿ ಎದೆಗೆ ಗುಂಡು..! ಇಲ್ಲಿದೆ ಸಿಸಿಟಿವಿ ದೃಶ್ಯ

Meloni-Modi: ಪ್ರಧಾನಿ ಮೋದಿಗೆ ಶುಭ ಹಾರೈಸಿದ ಇಟಲಿ ಪ್ರಧಾನಿ ಮೆಲೋನಿ, ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ ‘ಮೆಲೋಡಿ’