ಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

80 ವರ್ಷದ ಅಜ್ಜಿಯನ್ನು ಪ್ರೀತಿಸಿ ಮದುವೆಯಾದ್ದೇಕೆ 57ರ ವ್ಯಕ್ತಿ..? ಇದಕ್ಕೆ ಆಕೆಯ ಮಕ್ಕಳು ಮಾಡಿದ ಆರೋಪವೇನು..? ಏನಿದು ವಿಚಿತ್ರ ಲವ್ ಸ್ಟೋರಿ?

ನ್ಯೂಸ್ ನಾಟೌಟ್ : ಪ್ರೀತಿಗೆ ಕಣ್ಣಿಲ್ಲ ಎಂಬ ಮಾತಿದೆ, ಇದು ಆಗಾಗ ವಿಚಿತ್ರ ಮದುವೆ ಮತ್ತು ಪ್ರೇಮ ಪ್ರಕರಣಗಳ ಮೂಲಕ ಸಾಭೀತಾಗುತ್ತಲೇ ಇದೆ. ತಮಗಿಂತ 30, 40 ವರ್ಷ ದೊಡ್ಡವರನ್ನು ಪ್ರೀತಿಸಿ ಮದುವೆಯಾಗುವ ಹುಡುಗಿಯರೂ ಇದ್ದಾರೆ. ಇದೀಗಾ ಅಂತದ್ದೇ ವಿಚಿತ್ರ ಪ್ರೇಮ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

57 ವರ್ಷದ ಕ್ಯಾಲಿಫೋರ್ನಿಯಾದ ವ್ಯಕ್ತಿ ತನಗಿಂತ 23 ವರ್ಷ ಹಿರಿಯ ಅಂದರೆ 80 ವರ್ಷದ ಮುದುಕಿಯನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಡೈಲಿ ಸ್ಟಾರ್ ಪ್ರಕಾರ, ಡೇವಿಡ್ ಫೌಟ್(57) ಮತ್ತು ಕ್ಯಾರೊಲಿನ್ ಹಾಲೆಂಡ್ (80) ಎಂಬ ಈ ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಕ್ಯಾಲಿಫೋರ್ನಿಯಾದ ನಿವಾಸಿ ಡೇವಿಡ್ ಸ್ವಂತ ಮನೆ ಹೊಂದಿಲ್ಲ ಜೊತೆಗೆ ಖಾಯಂ ಕೆಲಸವಿಲ್ಲ. ಪ್ರತಿ ದಿನ ಸಣ್ಣಪುಟ್ಟ ರಿಪೇರಿ ಕೆಲಸಗಳನ್ನು ಮಾಡಿಕೊಂಡು ಜೀವನ ಕಳೆಯುತ್ತಿದ್ದರು. ಆದರೆ ಕೆಲವು ವಾರಗಳ ಹಿಂದೆ 80 ವರ್ಷದ ಕ್ಯಾರೋಲಿನ್ ಅವರನ್ನು ಭೇಟಿಯಾಗಿದ್ದು, ಇಬ್ಬರ ನಡುವೆ ಪ್ರೀತಿ ಅರಳಿದೆ ಎನ್ನಲಾಗಿದ್ದು, ಕ್ಯಾರೋಲಿನ್ ಬಹಳ ಶ್ರೀಮಂತ ಮಹಿಳೆ ಎಂದು ವರದಿ ತಿಳಿಸಿದೆ.

ಈಕೆಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಡೇವಿಡ್ ತಮ್ಮ ತಾಯಿಯನ್ನು ಹಣಕ್ಕಾಗಿ ಪ್ರೀತಿಯ ಹೆಸರಿನಲ್ಲಿ ವಂಚಿಸಿದ್ದಾರೆ ಎಂದು ಕ್ಯಾರೋಲಿನ್ ಮಕ್ಕಳು ಆರೋಪಿಸಿದ್ದಾರೆ ಎನ್ನಲಾಗಿದೆ.

5 ಕೋಟಿ ಮೌಲ್ಯದ ಆಸ್ತಿಯನ್ನು ಮಾರಿ ಡೇವಿಡ್‌ಗೆ ಸಂಪೂರ್ಣ ಹಣವನ್ನು ನೀಡುವುದಾಗಿ ಕ್ಯಾರೊಲಿನ್ ಭರವಸೆ ನೀಡಿದ್ದರು. ಆದರೆ ಈ ನಡುವೆ ಕ್ಯಾರೋಲಿನ್ ಆರೋಗ್ಯವು ಹದಗೆಟ್ಟಿದೆ ಮತ್ತು ಸ್ವಲ್ಪ ಸಮಯದಲ್ಲಿ ಆಕೆ ಕೊಮನೆಯುಸಿರೆಳೆದ ಘಟನೆ ನಡೆದಿದೆ.

ಆದರೆ ಕ್ಯಾರೊಲಿನ್ ಮರಣದ ನಂತರ ಆಕೆಯ ಎಲ್ಲಾ ಆಸ್ತಿಯನ್ನು ಆಕೆಯ ಇಬ್ಬರು ಹೆಣ್ಣುಮಕ್ಕಳು ಪಡೆದುಕೊಂಡಿದ್ದು,ಡೇವಿಡ್​​​​ಗೆ ಒಂದು ಪೈಸೆಯನ್ನೂ ನೀಡಲಿಲ್ಲ ಎನ್ನಲಾಗಿದೆ. ಈಗ ಡೇವಿಡ್ ಮತ್ತೆ ನಿರಾಶ್ರಿತನಾಗಿ ತನ್ನ ಹಳೆಯ ಜೀವನವನ್ನು ನಡೆಸುತ್ತಿದ್ದಾನೆ ಎಂದು ವರದಿ ತಿಳಿಸಿದೆ.

https://newsnotout.com/2023/11/telengana-and-congress-election-karnataka-issue/

FB PAGE : https://www.facebook.com/NewsNotOut2023

Insta : https://www.instagram.com/newsnotout/

Tweet : https://twitter.com/News_Not_Out

YouTube : https://www.youtube.com/@newsnotout8209

Related posts

ಮಾರಕಾಸ್ತ್ರಗಳನ್ನು ಹಿಡಿದು ರೀಲ್ಸ್ ಮಾಡುತ್ತಿದ್ದ 5 ಮಂದಿ ಅರೆಸ್ಟ್..! ಆಯುಧಗಳು ಪೊಲೀಸ್ ವಶಕ್ಕೆ..!

ಸುಳ್ಯ: ಕೆಲಸಕ್ಕೆಂದು ಬಂದವ ಮೊಬೈಲ್ ಮತ್ತು ಬೈಕ್‌ ಕದ್ದು ಪರಾರಿ..! ಇಲ್ಲಿದೆ ಸಂಪೂರ್ಣ ಮಾಹಿತಿ

ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಬಂದಿದ್ದ ಮುಸ್ಲಿಂ ಮುಖಂಡರಿಗೆ ಬೆದರಿಕೆ..! ಆಲ್ ಇಂಡಿಯಾ ಇಮಾಮ್ ಸಂಘಟನೆಯಿಂದ ರಾಜಿನಾಮೆಗೆ ಒತ್ತಡ..!