Uncategorized

ಕೋಳಿಗೆ ಟಿಕೆಟ್ ಕೊಟ್ಟ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕಂಡೆಕ್ಟರ್..! ಪ್ರಯಾಣಿಕ ಮಾಡಿದ್ದೇನು ಗೊತ್ತಾ?

ಚಿಕ್ಕಬಳ್ಳಾಪುರ: ನೀವು ಬಸ್ಸಿನಲ್ಲಿ ಬೆಕ್ಕಿನ ಮರಿ, ನಾಯಿ ಮರಿ, ಕೋಳಿಯನ್ನು ಹಿಡಿದುಕೊಂಡು ಪ್ರಯಾಣ ಮಾಡುತ್ತಿದ್ದಿರಾ? ಹಾಗಾದ್ರೆ ಸ್ವಲ್ಪ ಎಚ್ಚರವಾಗಿರಿ.ನಿಮ್ಮ ಜತೆ ನಿಮ್ಮೊಂದಿಗಿರುವ ಸಾಕು ಪ್ರಾಣಿಗಳಿಗೂ ಟಿಕೆಟ್ ಹಣ ಪಾವತಿಸಬೇಕಾಗುತ್ತೆ. ಅರೆ.. ಇದೇನಿದು? ಸಾಕು ಪ್ರಾಣಿಗಳಿಗೂ ಟಿಕೆಟಿಗೂ ಏನು ಸಂಬಂಧ ಎಂದು ಯೋಚನೆ ಮಾಡ್ತಿದ್ದೀರಾ? ಹೌದು, ಇಂಥದೊಂದು ಘಟನೆ ನಡೆದಿದೆ. ಕೇಳುವುದಕ್ಕೆ ಹಾಸ್ಯವೆಂದೆನಿಸಿದರೂ ಇದು ನಮ್ಮ ರಾಜ್ಯದಲ್ಲೇ ನಡೆದ ನೈಜ ಘಟನೆ.

ಏನಿದು ಘಟನೆ?

ಚಿಕ್ಕಬಳ್ಳಾಪುರ ಘಟಕದ ಕೆಎಸ್ಆರ್ ಟಿಸಿ ಬಸ್‌ನಲ್ಲಿ ಪೆರೇಸಂದ್ರದಿಂದ ಗುಡಿಬಂಡೆ ತಾಲೂಕಿನ ಸೋಮೇಶ್ವರಕ್ಕೆ ಹೋಗುತ್ತಿದ್ದ ಪ್ರಯಾಣಿಕ ತನ್ನ ಜತೆ ಕೋಳಿ ಕೊಂಡೊಯ್ಯುತ್ತಿದ್ದ. ಈ ವೇಳೆ ನಿರ್ವಾಹಕ ಕೋಳಿಗೂ 5 ರೂ. ಟಿಕೆಟ್ ನೀಡಿದ. ಟಿಕೆಟ್ ಪಡೆದ ಮಾಲೀಕ ಕೋಳಿಯನ್ನು ಸೀಟ್‌ ಮೇಲೆ ಕೂರಿಸಿ ಪ್ರಯಾಣ ಬೆಳೆಸಿದ. ಪ್ರಯಾಣಿಕರು ಕೋಳಿ ತೆಗೆದು ಸೀಟ್‌ ಬಿಟ್ಟು ಕೊಡಿ ಎಂದು ಕೇಳಿದಾಗ, ನಾನು ಟಿಕೆಟ್ ಪಡೆದಿದ್ದೇನೆ. ಹಾಗಾಗಿ ಕೋಳಿಯನ್ನು ನನ್ನ ಜತೆ ಸೀಟ್‌ನಲ್ಲಿ ಕೂರಿಸಿದ್ದೇನೆ ಎಂದು ಪ್ರಯಾಣಿಕ ಉತ್ತರ ನೀಡಿದ್ದಾನೆ. ಈ ಫೋಟೋ ಈಗ ಎಲ್ಲೆಡೆ ವೈರಲ್ ಆಗಿದೆ.

Related posts

ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ; ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ

ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಿ ಮನೆಯಲ್ಲೇ ಉತ್ತರ ಬರೆಯುವಂತೆ ಸೂಚನೆ ..! ಶಿಕ್ಷಕರ ಈ ನಡೆಗೆ ಪೋಷಕರು ಕೆಂಡಾಮಂಡಲ,ಪ್ರತಿಭಟನೆ..!

KSRTC ಬಸ್ ಚಲಾಯಿಸುತ್ತಿದ್ದ ವೇಳೆ ಚಾಲಕನಿಗೆ ‘ಫಿಟ್ಸ್‌’..! ನಿಯಂತ್ರಣ ಕಳೆದುಕೊಂಡ ಬಸ್ ವಿದ್ಯುತ್ ಕಂಬಕ್ಕೆ ಢಿಕ್ಕಿ..!