ತ್ರಿಶ್ಯೂರ್: ವಯಸ್ಸಿಗೆ ಬಂದ ಹುಡುಗರು ಹುಡುಗಿ ಹುಡುಕುವುದಕ್ಕಾಗಿ ಮ್ಯಾಟ್ರಿಮೋನಿಯಲ್, ದಲ್ಲಾಳಿ ಹೀಗೆ ಅನೇಕ ದಾರಿಗಳ ಮೂಲಕ ಸರ್ಕಸ್ ಮಾಡುತ್ತಿರುತ್ತಾರೆ. ಎಷ್ಟು ಹುಡುಕಿದರೂ ಕೆಲವರಿಗೆ ಹುಡುಗಿಯೇ ಸೆಟ್ಟಾಗುವುದಿಲ್ಲ. ಆದರೆ ಇಲ್ಲೊಬ್ಬ ಕೇರಳದ ಯುವಕ ಹುಡುಗಿ ಹುಡುಕುವುದಕ್ಕಾಗಿ ಸ್ಪೆಷಲ್ ಮಾರ್ಗ ಅನುಸರಿಸಿದ್ದಾನೆ. ತನ್ನ ಟೀ ಅಂಗಡಿ ಮುಂದೆಯೇ ಬೋರ್ಡ್ ಹಾಕಿ ಆಸಕ್ತ ಯುವತಿಯರು ಮದುವೆ ಆಗುವುದಕ್ಕೆ ಮುಂದೆ ಬರಬಹುದು ಎಂದು ವಿನೂತನ ಮಾರ್ಗ ಹುಡುಕಿದ್ದಾನೆ. ಯಾವ ಜಾತಿಯ ಹುಡುಗಿಯಾದರೂ ಪರವಾಗಿಲ್ಲ ಎಂದು ಬೇರೆ ಉದಾರತೆ ಮೆರೆದಿದ್ದಾನೆ. ಉನ್ನಿಕೃಷ್ಣನ್ ನ ಜಾಹೀರಾತು ಇದೀಗ ಎಲ್ಲ ಕಡೆ ವೈರಲ್ ಆಗಿದೆ.