ಕರಾವಳಿ

ಬಡ ಮಕ್ಕಳ ಓದಿಗಾಗಿ ವಿವಿಧ ಕಾಲೇಜುಗಳಿಗೆ ಉಚಿತ ಪುಸಕ್ತಗಳನ್ನು ನೀಡಿದ ಡಾ ಬಿ.ಪ್ರಭಾಕರ ಶಿಶಿಲ

978

ಸುಳ್ಯ: ಖ್ಯಾತ ಅರ್ಥಶಾಸ್ತ್ರಜ್ಞ, ಸುಳ್ಯ ನೆಹರೂ ಮೆಮೋರಿಯಲ್‌ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ ಬಿ.ಪ್ರಭಾಕರ ಶಿಶಿಲ ಅವರು ಬಡ ಮಕ್ಕಳ ಓದಿಗಾಗಿ ವಿವಿಧ ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗೆ ತಾವು ಬರೆದ ಪುಸಕ್ತಗಳನ್ನು ಉಚಿತವಾಗಿ ನೀಡಿದ್ದಾರೆ. ಮಕ್ಕಳಿಗೆ ಕನ್ನಡ ಪುಸಕ್ತವನ್ನು ಓದುವ ಹವ್ಯಾಸವಿರುತ್ತದೆ. ಆದರೆ ಅವರಿಗೆ ಅದನ್ನು ಕೊಂಡು ಓದುವಷ್ಟು ಶಕ್ತಿ ಇರುವುದಿಲ್ಲ. ಹೀಗಾಗಿ ಕಾಲೇಜು, ಶಾಲೆಗೆ ಉಚಿತ ಪುಸ್ತಕಗಳನ್ನು ನೀಡಿರುವುದಾಗಿ ಶಿಶಿಲರು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ.

4 ಕಾಲೇಜು, 1 ಶಾಲೆಗೆ ಪುಸ್ತಕ ದಾನ

ನೆಹರೂ ಮೆಮೊರಿಯಲ್‌ ಕಾಲೇಜು ಸುಳ್ಯ, ಎಸ್‌ ಡಿಎಂ ಕಾಲೇಜು ಉಜಿರೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ, ವಿಶ್ವ ವಿದ್ಯಾನಿಲಯ ಕಾಲೇಜು ಮಂಗಳೂರು ಹಾಗೂ ಶಿಶಿಲ ಹಿರಿಯ ಪ್ರಾಥಮಿಕ ಶಾಲೆಯ ಗ್ರಂಥಾಲಯಗಳಿಗೆ ತಲಾ 10 ಸಾವಿರ ರೂ. ಮೊತ್ತದ ಪುಸ್ತಕಗಳನ್ನು ಶಿಶಿಲರು ನೀಡಿದ್ದಾರೆ.

ಪುಸ್ತಕಗಳ ಸರದಾರ ಪ್ರಭಾಕರ ಶಿಶಿಲ

ಶಿಶಿಲರು ಅರ್ಥಶಾಸ್ತ್ರ ಪಠ್ಯ ಪುಸಕ್ತ ಸೇರಿದಂತೆ ಅನೇಕ ಕೃತಿಗಳನ್ನು ಹೊರ ತಂದಿದ್ದಾರೆ. ಪುಂಸ್ತ್ರಿ, ಮತ್ಸ್ಯಗಂಧಿ, ಕಪಿಲಳ್ಳಿಯ ಕಥೆಗಳು, ಮೂಡಣದ ಕೆಂಪುಕಿರಣ, ಇರುವುದೆಲ್ಲವ ಬಿಟ್ಟು ಕೃತಿಗಳು ಅತ್ಯಂತ ಜನಪ್ರಿಯ ಕೃತಿಗಳಾಗಿದ್ದು ಇತರೆ ಭಾಷೆಗಳಿಗೂ ಅನುವಾದಗೊಳ್ಳುತ್ತಿದೆ.

See also  ಮಸೂದ್ ಹತ್ಯೆ ಪ್ರಕರಣದ ನಾಲ್ಕನೇ ಆರೋಪಿ ಜಾಮೀನು ಮೇಲೆ ಬಿಡುಗಡೆ, ಹೈಕೋರ್ಟ್ ಆದೇಶ
  Ad Widget   Ad Widget   Ad Widget   Ad Widget   Ad Widget   Ad Widget   Ad Widget