ಸಂಘರ್ಷಕ್ಕೆ ಕಾರಣವಾದ ಗಾಜಾ ಪಟ್ಟಿಯನ್ನು ಸ್ವಾಧೀನಕ್ಕೆ ಪಡೆಯಲು ಮುಂದಾದ ಅಮೆರಿಕ..! ಇಸ್ರೇಲ್ ಅಧ್ಯಕ್ಷರ ಎದುರಲ್ಲೇ ಟ್ರಂಪ್ ಅಚ್ಚರಿಯ ಹೇಳಿಕೆ..!

0

ನ್ಯೂಸ್ ನಾಟೌಟ್: ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಿನ ಸಂಘರ್ಷಕ್ಕೆ ಕಾರಣವಾಗಿರುವ ಗಾಜಾಪಟ್ಟಿಯನ್ನು ಅಮೆರಿಕ ವಶಕ್ಕೆ ಪಡೆಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ.

ಇಸ್ರೇಲ್- ಹಮಾಸ್ ನಡುವಿನ ಕದನ ವಿರಾಮದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಇಸ್ರೇಲ್​ನ ಗಾಜಾ ಪಟ್ಟಿಯನ್ನು ಸ್ವಾಧೀನಕ್ಕೆ ಪಡೆಯಲು ಮುಂದಾಗಿದ್ದಾರೆ. ಈ ಕುರಿತು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದು, ಅಚ್ಚರಿ ಎಂದರೆ ಟ್ರಂಪ್ ಈ ಘೋಷಣೆ ಮಾಡುವ ವೇದಿಕೆಯಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಕೂಡ ಉಪಸ್ಥಿತರಿದ್ದರು.

ಅಮೆರಿಕಕ್ಕೆ ಭೇಟಿ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆಗಿನ ಮಾತುಕತೆಯ ನಂತರ ಟ್ರಂಪ್ ಈ ಬಗ್ಗೆ ಘೋಷಣೆ ಮಾಡಿರುವುದು ಭಾರೀ ಕುತೂಹಲ ಮೂಡಿಸಿದೆ. ಪುನರಾಭಿವೃದ್ಧಿ ಯೋಜನೆಯಡಿ ಅಮೆರಿಕ ಗಾಜಾ ಪಟ್ಟಿಯನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಪುನರಾಭಿವೃದ್ಧಿ ಯೋಜನೆಯಡಿಯಲ್ಲಿ ಪ್ಯಾಲೆಸ್ತೀನಿಯರನ್ನು ಬೇರೆಡೆ ಪುನರ್ವಸತಿಗೊಳಿಸಿದ ನಂತರ ಅಮೆರಿಕವು ಗಾಜಾವನ್ನು ಸ್ವಾಧೀನಪಡಿಸಿಕೊಳ್ಳುತ್ತದೆ. ಈ ಯೋಜನೆಯಡಿ ಪ್ಯಾಲೆಸ್ತೀನಿಯರನ್ನು ಬೇರೆಡೆ ಪುನರ್ವಸತಿ ಮಾಡಲಾಗುವುದು. ಈ ಯೋಜನೆಯು ಎನ್ಕ್ಲೇವ್ ಅನ್ನು “ಮಧ್ಯಪ್ರಾಚ್ಯದ ರಿವೇರಿಯಾ” ಆಗಿ ಪರಿವರ್ತಿಸಲಿದೆ. ಅಮೆರಿಕ ಗಾಜಾ ಪಟ್ಟಿಯನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಮತ್ತು ನಾವು ಗಾಜಾದೊಂದಿಗೆ ಕೆಲಸ ಮಾಡುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.

Related Articles

Latestಕ್ರೈಂದೇಶ-ಪ್ರಪಂಚದೇಶ-ವಿದೇಶರಾಜ್ಯ

ತಲೆಗೆ ಗುಂಡು ತಗುಲಿ ಕರ್ನಾಟಕ ಮೂಲದ ಯೋಧ ಸಾವು..! ‘ಮಿಸ್‌ಫೈರ್‌’ ಎಂದ ಸೇನಾಧಿಕಾರಿ..!

ನ್ಯೂಸ್‌ ನಾಟೌಟ್: ಬೆಳಗಾವಿಯ ಮೂಡಲಗಿ ತಾಲೂನಿನ ಕಲ್ಲೋಳಿಯ ಯೋಧ ಪ್ರವೀಣ ಸುಭಾಷ ಖಾನಗೌಡ್ರ (24) ಬುಧವಾರ...

Latestಕೊಡಗುಕ್ರೈಂ

ಕೊಡಗು: 14 ದಿನದ ಶಿಶುವಿನ ತಾಯಿ ಆತ್ಮಹತ್ಯೆ..! ಸ್ನಾನದ ಕೋಣೆಯಲ್ಲಿ ಸೀರೆಯಿಂದ ನೇಣುಬಿಗಿಕೊಂಡ ಸ್ಥಿತಿಯಲ್ಲಿ ಪತ್ತೆ..!

ನ್ಯೂಸ್‌ ನಾಟೌಟ್: 14 ದಿನದ ಮಗು ಹಾಗೂ ಪತಿಯನ್ನು ತ್ಯಜಿಸಿ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ...

Latestಕ್ರೈಂಬೆಂಗಳೂರು

ಮಹಿಳಾ ಎಸಿಪಿ ಜತೆ ಪೊಲೀಸ್ ಅಧಿಕಾರಿಯ ಲವ್ವಿಡವ್ವಿ..! ಪತ್ನಿಯ ಹತ್ಯೆಗೆ ಸಂಚು ರೂಪಿಸಿದ್ದ ಪೊಲೀಸ್ ಅಧಿಕಾರಿ ವಿರುದ್ಧ ಕೇಸ್..!

ನ್ಯೂಸ್‌ ನಾಟೌಟ್: ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪತ್ನಿ, ತಮ್ಮ ಪತಿ ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ...

Latestಕ್ರೈಂಬೆಂಗಳೂರು

ಹೆಂಡತಿಯ ಬಾಯಿಗೆ ಅಂಟು ದ್ರಾವಣ ಸುರಿದು ಕೊಲ್ಲಲು ಯತ್ನ..! ಗಂಡ ಅರೆಸ್ಟ್..!

ನ್ಯೂಸ್‌ ನಾಟೌಟ್: ಬೆಂಗಳೂರಿನ ವ್ಯಕ್ತಿಯೊಬ್ಬ ತನ್ನ ಹೆಂಡತಿ ಬೇರೆಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಲ್ಲಿ...

@2025 – News Not Out. All Rights Reserved. Designed and Developed by

Whirl Designs Logo