ವಿಟ್ಲ: ಕರಾವಳಿಯಾದ್ಯಂತ ಭಾರಿ ಸದ್ದು ಮಾಡಿದ್ದ ಕೊರಗಜ್ಜನ ಅವಹೇಳನಕಾರಿ ವೇಷಭೂಷಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗ ಮತ್ತೊಂದು ತಿರುವು ಸಿಕ್ಕಿದೆ. ಕೊರಗಜ್ಜನ ವೇಷ ಧರಿಸಿ ಕುತ್ತಿಗೆಗೆ ಚಪ್ಪಲು ಹಾಕಿಕೊಂಡು ಬಂದಿದ್ದ ಮದುಮಗ ಉಮರುಲ್ ಭಾಷಿತ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮಂಗಳೂರು 4ನೇ ಹೆಚ್ಚುವರಿ ಸೆಷನ್ಸ್ ನ್ಯಾಯಲಯ ವಜಾ ಮಾಡಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಆತನ ಕಾನೂನು ಹೋರಾಟ ಮತ್ತೆ ಮುಂದುವರಿಯುವಂತಾಗಿದೆ. ಈತನ ಒಂದು ತಪ್ಪಿನಿಂದಾಗಿ ಕರಾವಳಿಯಾದ್ಯಂತ ಕೋಮು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತ್ತು. ಸ್ವತಃ ಮುಸ್ಲಿಂ ಸಮುದಾಯವೇ ಉಮರುಲ್ ನ ನೀಚ ಕೃತ್ಯವನ್ನು ಖಂಡಿಸಿದ್ದನ್ನು ಸ್ಮರಿಸಬಹುದು.