ಕರಾವಳಿ

ಕಾರ್ಕಳ: ಬಡವರಿಗೆ ಮನೆ ನಿರ್ಮಿಸಿ ಹಸ್ತಾಂತರಿಸಿದ ರೋಟರಿ ಸಂಸ್ಥೆ

337
Spread the love

ಕಾರ್ಕಳ: ಬಜಗೋಳಿ ನಿವಾಸಿಯಾಗಿರುವ ತಂಗಿ ಪರವಾ ಎಂಬ ಫಲಾನುಭವಿಗೆ ರೋಟರಿ ಸಂಸ್ಥೆಯ ವತಿಯಿಂದ ರೋಟರಿ ನಿಲಯ ಎಂಬ ಹೆಸರಿನಲ್ಲಿ ಮನೆಯನ್ನು ಹಸ್ತಾಂತರಿಸಲಾಯಿತು. ರೋಟರಿ ಸಂಸ್ಥೆ ಕಾರ್ಕಳ ಜಿಲ್ಲಾ ಗವರ್ನರ್ ಅಧಿಕೃತ ಭೇಟಿಯ ಸಂದರ್ಭದಲ್ಲಿ ಈ ಕಾರ್ಯಕ್ರಮ ನೆರವೇರಿತು. ರೋಟರಿ ಗವರ್ನರ್ ರಾಮಚಂದ್ರ ಮೂರ್ತಿ ರೋಟರಿ ನಿಲಯವನ್ನು ಉದ್ಘಾಟಿಸಿ, ನೊಂದ ಮನಸ್ಸಿನ ಮುಖದಲ್ಲಿ ಸಂತಸವನ್ನು ಕಾಣುವುದೇ ನಿಜವಾದ ಸೇವೆ ಎಂದು ತಿಳಿಸಿದರು. ಮುಡಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಶೆಟ್ಟಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಮೃತ ಪ್ರಭು .ಮಾಜಿ ಜಿಲ್ಲಾ ಗವರ್ನರ್ ಡಾಕ್ಟರ್ ಭರತೇಶ್ ಆದಿರಾಜ. ಪಿಡಿಓ ರಮೇಶ್, ಮುಡಾರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಪಾಠಕ. ಸ್ವಚ್ಛ ಬ್ರಿಗೇಡ್ ಬಜಗೋಳಿಯ ಅಧ್ಯಕ್ಷರು ಹಾಗೂ ಸದಸ್ಯರು, ಗಾಯತ್ರಿ ಪ್ರಭು ಸಮಾಜಸೇವಕಿ. ಮುಂತಾದವರು ಉಪಸ್ಥಿತರಿದ್ದರು ರೋಟರಿ ಸಂಸ್ಥೆ ಕಾರ್ಕಳದ ಅಧ್ಯಕ್ಷರಾದ ಸುರೇಶ್ ನಾಯಕ್ ಸ್ವಾಗತಿಸಿದರು. ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.

See also  ಕೊಡಗು: ಹಲವೆಡೆ ಭೂಮಿಗೆ ತಂಪೆರೆದ ಮಳೆ
  Ad Widget   Ad Widget   Ad Widget   Ad Widget   Ad Widget   Ad Widget