ಕ್ರೈಂ

ಕೊಡಗಿನಲ್ಲಿ ಆನೆ ದಾಳಿಗೆ ಮತ್ತೊಂದು ಬಲಿ, ವಿದ್ಯಾರ್ಥಿ ಸಾವು

ಮಡಿಕೇರಿ: ಕೊಡಗಿನಲ್ಲಿ ಜನ ಕಾಡಾನೆ ದಾಳಿಗೆ ಮತ್ತೊಮ್ಮೆ ತತ್ತರಿಸಿದ್ದಾರೆ. ಇತ್ತೀಚೆಗೆ ಕೊಡಗಿನ ಮದೆನಾಡು ಎಂಬಲ್ಲಿ ಕಾಡಾನೆಯೊಂದು ವ್ಯಕ್ತಿಯೊಬ್ಬರನ್ನು ತುಳಿದು ಸಾಯಿಸಿತ್ತು. ಅಂತಹುದೇ ಮತ್ತೊಂದು ಪ್ರಕರಣ ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಸಿದ್ಧಾಪುರದಿಂದ ವರದಿಯಾಗಿದೆ. ವಿದ್ಯಾರ್ಥಿಗಳಿಬ್ಬರ ಮೇಲೆ ಆನೆ ಭೀಕರ ದಾಳಿ ನಡೆಸಿದ್ದು ಒಬ್ಬ ಸಾವಿಗೀಡಾಗಿ ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಅರೆಕಾಡಿನಿಂದ ನೆಲ್ಯಹುದಿಕೇರಿಗೆ ಬೈಕ್ ನಲ್ಲಿ ಆಶಿಕ್ ಹಾಗೂ ಅಸ್ಮಿಲ್ ಬರುತ್ತಿದ್ದ ವೇಳೆ ದಿಢೀರ್‌ ಕಾಡಾನೆ ಬೈಕ್ ಮೇಲೆ ದಾಳಿ ಮಾಡಿದೆ. ದಾಳಿಯಲ್ಲಿ ಎದೆಯ ಭಾಗಕ್ಕೆ ಗಂಭೀರ ಗಾಯಗೊಂಡಿದ್ದ 19 ವರ್ಷದ ಆಶಿಕ್ ನನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆ ತರುತ್ತಿದ್ದಂತೆ ಆತ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. 19 ವರ್ಷದ ಮತ್ತೋರ್ವ ಯುವಕ ಅಸ್ಮಿಲ್ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

Related posts

ಸಾಮಾಜಿಕ ಜಾಲತಾಣದಲ್ಲಿ ಬ್ಲೂ ಟಿಕ್ ಮಾರ್ಕ್ ಕಳೆದುಕೊಂಡ ಪ್ರಜ್ವಲ್ ರೇವಣ್ಣ..! ಇಲ್ಲಿದೆ ಸಂಪೂರ್ಣ ಮಾಹಿತಿ

5 ರೂ. ನಾಣ್ಯ ನುಂಗಿದ ಮಗು ಸಾವು, ಚಿಕಿತ್ಸೆಗೆ ಸ್ಪಂದಿಸದೆ ಪ್ರಾಣ ಬಿಟ್ಟ ಖುಷಿ

ತನಿಖೆಗೆ ಹೆದರಿ ಚೈತ್ರಾ ಕುಂದಾಪುರ ಕಾಂಗ್ರೆಸ್ ಮಾಧ್ಯಮ ವಕ್ತಾರೆ ಮನೆಯಲ್ಲಿ ಆಶ್ರಯ ಪಡೆದರಾ? ಹಿಂದೂ ಹೋರಾಟಗಾರ್ತಿ ಕೋಟಿ ಕೋಟಿ ವಂಚನೆ ಪ್ರಕರಣಕ್ಕೆ ಟ್ವಿಸ್ಟ್!