ಮೈಸೂರು: ಐದು ರೂಪಾಯಿ ನಾಣ್ಯ ನುಂಗಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ. ಬಿಳಿಕೆರೆಯ ಆಯರ ಹಳ್ಳಿಯ ನಾಲ್ಕು ವರ್ಷದ ಮಗು ಖುಷಿ ಮೃತ ಬಾಲಕಿಯಾಗಿದ್ದಾಳೆ. ಈಕೆ ಮೈಸೂರಿನ ಹಿರಿಕ್ಯಾತನ ಹಳ್ಳಿಯ ಅಜ್ಜಿ ಮನೆಯಲ್ಲಿ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಐದು ರೂ. ನಾಣ್ಯವನ್ನು ನುಂಗಿದ್ದಾಳೆ. ತಕ್ಷಣ ಈಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವ ಪ್ರಯತ್ನ ನಡೆಸಲಾಯಿತಾದರೂ ಆಕೆ ಬದುಕುಳಿಯಲಿಲ್ಲ ಎಂದು ಕುಟುಂಬ ಮೂಲಗಳು ತಿಳಿಸಿವೆ.
previous post