ಕರಾವಳಿಸುಳ್ಯ

ಸುಳ್ಯದಲ್ಲಿ ‘ಕಂಡದ ಗೌಜಿ ಕೆಸರ್ದ ಪರ್ಬ’, ವಿಷ್ಣುಮೂರ್ತಿ ಒತ್ತೆಕೋಲ ಗದ್ದೆಯಲ್ಲಿ ಅದ್ದೂರಿ ಕೆಸರು ಗದ್ದೆ ಸ್ಪರ್ಧೆಗಳಿಗೆ ಆಹ್ವಾನ

ನ್ಯೂಸ್ ನಾಟೌಟ್ : ಪ್ರತಾಪ ಯುವಕ ಮಂಡಲ (ರಿ)ಮತ್ತು ಚೈತ್ರ ಯುವತಿ ಮಂಡಲ (ರಿ) ಅಜ್ಜಾವರದ ಜಂಟಿ ಆಶ್ರಯದಲ್ಲಿ ‘ಕಂಡದ ಗೌಜಿ ಕೆಸರ್ದ ಪರ್ಬ ಇದೇ ಬರುವ ಜುಲೈ 30 ರಂದು ಅಜ್ವಾವರ ವಿಷ್ಣುಮೂರ್ತಿ ಒತ್ತೆಕೋಲ ಗದ್ದೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಪ್ರತಾಪ ಯುವಕ ಮಂಡಲ ಅಧ್ಯಕ್ಷ ಗುರುರಾಜ್ ಅಜ್ಜಾವರ ಸುಳ್ಯದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ವೇಳೆ ಮಾತನಾಡಿದ ಪ್ರತಾಪ ಯುವಕ ಮಂಡಲ ಅಧ್ಯಕ್ಷ ಗುರುರಾಜ್ ಅಜ್ಜಾವರ ಕೆಸರು ಗದ್ದೆ ಇದು 2 ನೇ ಬಾರಿ ಅದ್ಧೂರಿಯಿಂದ ನಡೆಯುತಿದೆ. ವಿಶೇಷ ವಾಗಿ ನಮ್ಮ ತುಳುನಾಡಿನ ಆಟೋಟ ಸ್ಪರ್ಧೆ , ಹಿಂದಿನ ಕಾಲದ ನೆನಪುಗಳನ್ನು ಉಳಿಸುವ ಉದ್ದೇಶ ಹೊಂದಿದ್ದೇವೆ ಎಂದರು.

ಈ ಕೆಸರು ಗದ್ದೆಯಲ್ಲಿ ಕಂಬಳ, ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟ, ವಾಲಿಬಾಲ್ ಮೊದಲಾದ ಸ್ಪರ್ಧೆಗಳು ನಡೆಯಲಿವೆ. ಸಾರ್ವಜನಿಕರು ಕೂಡಾ ಸ್ಪರ್ಧೆಯಲ್ಲಿ ಮುಕ್ತವಾಗಿ ಭಾಗವಹಿಸಬಹುದು ಎಂದು ತಿಳಿಸಿದ್ದಾರೆ. ನಂತರ ಮಾತನಾಡಿದ ಚೈತ್ರ ಮತ್ತು ಯುವತಿ ಮಂಡಲ ಅಧಕ್ಷೆ ಶಶ್ಮಿ ಭಟ್ ಹಂಚಿನಮನೆ ಮಾತನಾಡಿ, ವಿಭಿನ್ನ ವಾದ ಆಟೋಟ ಸ್ಪರ್ದೆಗಳು ನಡೆಯಲಿದ್ದು, ಮಕ್ಕಳಿಗೆ, ಮಹಿಳೆಯರಿಗೆ , ದಂಪತಿಗಳಿಗೆ, ಹಿರಿಯನಾಗರಿಕರಿಗೆ ಹೀಗೆ ಎಲ್ಲ ವಯೋಮಾನದವರಿಗೂ ವಿಶೇಷ ಕ್ರೀಡಾ ಮಂನೋರಂಜನೆಯನ್ನು ಆಯೋಜಿಸಲಾಗಿದೆ ಎಂದರು.

ಎಲ್ಲರೂ ಕೂಡಾ ಸಹಕರಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಬೇಕು ಎಂದರು. ಈ ಸಂದರ್ಭದಲ್ಲಿ ಪ್ರಧಾನಕಾರ್ಯದರ್ಶಿ ಅನಿಲ್ ರಾಜ್ ಕರ್ಲಪ್ಪಾಡಿ, ಖಜಾಂಜಿ ಲೋಕೇಶ್ ಮಾವಿನಪಳ್ಳ, ಲಕ್ಷ್ಮಿ ಪಲ್ಲತಡ್ಕ,, ರಜನಿ ಗೋರಡ್ಕ, ವೇದಾವತಿ ಕಲ್ಲಪಳ್ಳಿ ಉಪಸ್ಥಿತರಿದ್ದರು.

Related posts

ಉಡುಪಿ ಜಿಲ್ಲೆಯ ಶಾಲಾ-ಕಾಲೇಜಿಗೂ ರಜೆ ಘೋಷಣೆ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಿಂದ ಕೇರಳದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ನೂರಾರು ಜನರಿಂದ ಹೆಸರು ನೋಂದಣಿ

ಸುಳ್ಯ: ಕಟ್ಟಿ ಹಾಕಿದ ಹಗ್ಗವನ್ನೇ ನುಂಗಿದ ಹಸು..! ಆಪರೇಷನ್ ಮಾಡಿದ ವೈದ್ಯರಿಗೆ ಹಗ್ಗದ ಜತೆಗೆ ಸಿಕ್ಕಿತು ಮತ್ತೊಂದು ವಸ್ತು..!