ಕರಾವಳಿ

ಸುಳ್ಯ: ಕಟ್ಟಿ ಹಾಕಿದ ಹಗ್ಗವನ್ನೇ ನುಂಗಿದ ಹಸು..! ಆಪರೇಷನ್ ಮಾಡಿದ ವೈದ್ಯರಿಗೆ ಹಗ್ಗದ ಜತೆಗೆ ಸಿಕ್ಕಿತು ಮತ್ತೊಂದು ವಸ್ತು..!

417
Spread the love

ಸುಳ್ಯ: ಹಸು ಹುಲ್ಲು ತಿನ್ನುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಇಲ್ಲೊಂದು ಹಸು ಕಟ್ಟಿ ಹಾಕಿದ ಹಗ್ಗವನ್ನೇ ತಿಂದು ತೇಗಿದೆ. ಬಳಿಕ ಹೊಟ್ಟೆ ನೋವಿನಿಂದ ನರಳಿದೆ. ಈ ವಿಚಿತ್ರ ಘಟನೆ ಸುಳ್ಯದ ಜಟ್ಟಿಪಳ್ಳದ ಗಣೇಶ್ ಎಂಬವರ ಮನೆಯಲ್ಲಿ ನಡೆದಿದೆ.

ಏನಿದು ಘಟನೆ?

ಹಟ್ಟಿಯಲ್ಲಿ ಕಟ್ಟಿ ಹಾಕಿದ ದನಕ್ಕೆ ಇದ್ದಕ್ಕಿದ್ದಂತೆ ಹೊಟ್ಟೆ ಉಬ್ಬರಿಸಿಕೊಂಡಿದೆ. ಗಂಟಲು ಮತ್ತು ಹೊಟ್ಟೆಯ ತಳಭಾಗದಲ್ಲಿ ಊತ ಕಾಣಿಸಿಕೊಂಡಿದೆ. ತಕ್ಷಣ ಮನೆಯವರು ಸುಳ್ಯ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಿತೀನ್ ಪ್ರಭು ಅವರನ್ನು ಸಂಪರ್ಕಿಸಿದರು. ‌ ಡಾ.ನಿತೀನ್ ಪ್ರಭುರವರು ಜಟ್ಟಿಪಳ್ಳದ ಗಣೇಶ ಅವರ ಮನೆಗೆ ತೆರಳಿ ಹಸುವನ್ನು ಪರೀಕ್ಷೆ ನಡೆಸಿ ಮೂರು ದಿನ ಚಿಕಿತ್ಸೆ ನೀಡಿದರು. ಆದರೂ ಯಾವುದೇ ಪ್ರಯೋಜ ಆಗಲಿಲ್ಲ. ಕೊನೆಗೆ ವೈದ್ಯರು ಆಪರೇಷನ್ ನಡೆಸಿದರು. ಹೊಟ್ಟೆ ಬಗೆದ ಅವರಿಗೆ ಭಾರಿ ಅಚ್ಚರಿಗಳು ಕಾದಿದ್ದವು. ಹಸು ಕಟ್ಟಿ ಹಾಕಿದ ಹಗ್ಗವನ್ನೇ ತಿಂದಿತ್ತು. ಮಾತ್ರವಲ್ಲ ಹೊಟ್ಟೆಯೊಳಗೆ ಬೇಲಿ ತಂತಿಯೊಂದು ಕುತ್ತಿ ಸಿಕ್ಕಿ ಹಾಕಿಕೊಂಡಿತ್ತು. ಸದ್ಯ ಹಸು ಚೇತರಿಸಿಕೊಳ್ಳುತ್ತಿದೆ ಎಂದು ಹಸುವಿನ ಮಾಲೀಕ ಗಣೇಶ್ ಸಂತೋಷ ವ್ಯಕ್ತಪಡಿಸಿದ್ದಾರೆ.

See also  ಬರೋಬ್ಬರಿ ಏಳು ವರ್ಷಗಳ ನಂತರ 'ಚೆಲುವಿನ ಚಿತ್ತಾರ' ಬೆಡಗಿ ಕಮ್ ಬ್ಯಾಕ್..! ತುಳುನಾಡಿನ ಜನಪ್ರಿಯ ಕಂಬಳದ ಸುತ್ತ ಕೇಂದ್ರೀಕೃತವಾದ ಕಥೆ 'ಕರಾವಳಿ'ಯಲ್ಲಿ ಅಮೂಲ್ಯ..!
  Ad Widget   Ad Widget   Ad Widget   Ad Widget   Ad Widget   Ad Widget