ಕ್ರೀಡೆ/ಸಿನಿಮಾ

IPL 2022: ಮೆಗಾ ಹರಾಜು ಬೆಂಗಳೂರಿನಿಂದ ಶಿಫ್ಟ್?

ನವದೆಹಲಿ: ಹೆಚ್ಚುತ್ತಿರುವ ಕರೋನಾ ವೈರಸ್ ಪ್ರಕರಣಗಳ ಮಧ್ಯೆ ಭಾರತ ಮತ್ತೊಮ್ಮೆ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ನ ಹೊಸ ಋತುವನ್ನು ಬರ ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದೆ.

10 ತಂಡಗಳೊಂದಿಗೆ ಈ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಹೊಸ ಸೀಸನ್ ಬಗ್ಗೆ ಸಾಕಷ್ಟು ಕುತೂಹಲದ ಜೊತೆಗೆ ಆತಂಕವೂ ಇದ್ದೇ ಇದೆ. ಆದರೆ ಕೂಟದ ಪ್ರಾರಂಭದ ಮೊದಲು, ದೊಡ್ಡ ಹರಾಜು ಕೂಡ ಒಂದು ಪ್ರಮುಖ ಆಕರ್ಷಣೆಯಾಗಿದೆ. ಇದರಲ್ಲಿ ಎಲ್ಲಾ 10 ಫ್ರಾಂಚೈಸಿಗಳು ತಮ್ಮ ತಂಡಗಳನ್ನು ರೆಡಿ ಮಾಡುವುದಕ್ಕೆ ಸಜ್ಜಾಗಿವೆ. ಈ ಹರಾಜು ಯಾವಾಗ ಮತ್ತು ಎಲ್ಲಿ ನಡೆಯುತ್ತದೆ ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲ.

ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜನವರಿ ಶನಿವಾರದಂದು ಎಲ್ಲಾ ಫ್ರಾಂಚೈಸಿಗಳೊಂದಿಗೆ ಮಹತ್ವದ ಸಭೆ ನಡೆಸಲಿದೆ. ಈ ಸಭೆಯಿಂದ, ಹರಾಜಿನ ದಿನಾಂಕ ಮತ್ತು ಸ್ಥಳ ಮತ್ತು ಪಂದ್ಯಾವಳಿಯನ್ನು ಭಾರತದಲ್ಲಿ ನಡೆಸಬೇಕೆ ಅಥವಾ ಭಾರತದಿಂದ ಹೊರಗೆ ನಡೆಸಬೇಕೆ? ಎಂಬ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ.

Related posts

ದರ್ಶನ್ ಆ್ಯಂಡ್ ಟೀಮ್ ನಿಂದ ನಿರಂತರ ರೌಡಿಗಳ ಸಂಪರ್ಕ..! ಹಲವು ದಂಧೆಗಳಲ್ಲಿ ದಾಸನಿಗೆ ರೌಡಿಗಳಿಂದ ಸಹಾಯ..?

ಭಾರತ – ಪಾಕ್ ವಿಶ್ವಕಪ್ ಹೈವೋಲ್ಟೆಜ್ ಪಂದ್ಯಕ್ಕೆ ಕ್ಷಣಗಣನೆ, ಹೇಗಿದೆ ಗೊತ್ತಾ ಟೀಂ ಇಂಡಿಯಾ ಬಲ?

ಲೆನ್ಸ್‌ ಧರಿಸಿ ಎಡವಟ್ಟು ಮಾಡಿಕೊಂಡ ಖ್ಯಾತ ನಟಿ..! ಮುಂದೇನಾಯ್ತು..? ಇಲ್ಲಿದೆ ಸಂಪೂರ್ಣ ವಿವರ