ಕ್ರೈಂವೈರಲ್ ನ್ಯೂಸ್

1ನೇ ತರಗತಿ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರ..! 6 ವರ್ಷದ ಬಾಲಕಿ ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್: ಹಾಡುಹಗಲೇ 1ನೇ ತರಗತಿ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ ದುರ್ಘಟನೆ ರಾಜ್ಯದ ಗೃಹ ಸಚಿವ ಡಾ.ಜಿ. ಪರಮೇಶ್ವರ ತವರು ಕ್ಷೇತ್ರ ಕೊರಟಗೆರೆಯಲ್ಲಿ ನಡೆದಿದೆ.

ಕುಡಿದ ಅಮಲಿನಲ್ಲಿ ತೇಲಾಡುತ್ತಿದ್ದ ಯುವಕ, ನಿರ್ಜನ ಪ್ರದೇಶದಲ್ಲಿ ಮನೆಯ ಮುಂದೆ ಕುಂಟೆಬಿಲ್ಲೆ ಆಟವಾಡುತ್ತಿದ್ದ 6 ವರ್ಷದ ಪುಟ್ಟ ಬಾಲಕಿಯನ್ನು ನೋಡಿ ಆಕೆಯನ್ನು ಮನೆಯೊಳಗೆ ಎಳೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಬಾಲಕಿ ತೀವ್ರ ನೋವಿನಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿ ತಿಳಿಸಿದೆ.

ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿ ಈ ದುರ್ಘಟನೆ ನಡೆದಿದೆ. ಶಾಲೆ ಮುಗಿಸಿ ಮಧ್ಯಾಹ್ನ ಮನೆಗೆ ಬಂದಿದ್ದ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ್ದರಿಂದ ಮನೆ ಮುಂದೆ ಗೆರೆಯನ್ನು ಎಳೆದು ಒಬ್ಬಳೇ ಕಜುಂಟೆಬಿಲ್ಲೆ ಆಡುತ್ತಿದ್ದಳು. ಈ ವೇಳೆ ಇದೇ ದಾರಿಯಲ್ಲಿ ಬಂದ ಯುವಕ ಒಬ್ಬಂಟಿ ಹುಡುಗಿ ಆಟವಾಡುವುದನ್ನು ಕೆಲಹೊತ್ತು ಗಮನಿಸಿದ್ದಾನೆ. ಈ ವೇಳೆ ಮನೆಯಲ್ಲಿ ಯಾರೂ ಇಲ್ಲವೆಂದು ತಿಳಿದುಕೊಂಡು, ಬಾಲಕಿಯನ್ನು ಮನೆಯೊಳಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

ಅತ್ಯಾಚಾರದ ಆರೋಪಿ ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ ಮೂಲದ ಪವನ್(23) ಎಂದು ಗುರುತಿಸಲಾಗಿದೆ.
ಇನ್ನು ಮನೆಯಲ್ಲಿ ಬಾಲಕಿ ಕಿರುಚೊದನ್ನ ಕಂಡು ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಬಂದು ನೋಡಿದಾಗ ಕಾಮುಕ ಅಟ್ಟಹಾಸಕ್ಕೆ ಬಾಲಕಿ ನಲುಗಿ ಹೋಗಿರುವ ದೃಶ್ಯವನ್ನು ಕಂಡು ರಕ್ಷಣೆ ಮಾಡಿದ್ದಾರೆ. ಅಕ್ಕಪಕ್ಕದ ಮನೆಯವರು ಬರುತ್ತಿದ್ದಂತೆಯೇ ಎಲ್ಲರೂ ಬಾಲಕಿ ರಕ್ಷಣೆಗೆ ಗಮನ ಹರಿಸಿದರೆ ಇತ್ತ ಎಲ್ಲರಿಂದ ತಪ್ಪಿಸಿಕೊಂಡು ಓಡಿ ಹೋಗಲು ಮುಂದಾಗಿದ್ದನು. ಆಗ, ಗ್ರಾಮಸ್ಥರು ಈತ ಓಡುವುದನ್ನು ಗಮನಿಸಿ ಆತನನ್ನು ಹಿಡಿದಿದ್ದಾರೆ ಮತ್ತು ಬಾಲಕಿ ರಕ್ಷಣೆ ಮಾಡಿದ ಜನರು ಯುವಕನನ್ನು ವಶಕ್ಕೆ ಪಡೆದು ಥಳಿಸಿದ್ದಾರೆ. ನಂತರ, ಪೊಲೀಸರಿಗೆ ಕರೆ ಮಾಡಿ ಆತನನ್ನು ಪೊಲೀಸರಿಗೊಪ್ಪಿಸಿದ್ದಾರೆ.

Related posts

ಕುಕ್ಕರ್ ಸ್ಪೋಟ, ಸ್ವಲ್ಪದರಲ್ಲೇ ಗೃಹಿಣಿ ಪ್ರಾಣಾಪಾಯದಿಂದ ಪಾರು

ಆನೆಗೆ ಸ್ನಾನ ಮಾಡಿಸುವಾಗ ಕೆರೆಯಲ್ಲಿ ಮುಳುಗಿ ಕಾವಾಡಿಗ ಸಾವು..! ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ದುರ್ಘಟನೆ..!

ಸಂಸದ ಪ್ರತಾಪ್‌ಸಿಂಹ ವಿರುದ್ಧ ಅವಹೇಳನಾಕಾರಿ ಪೋಸ್ಟ್ ಹಾಕಿದ್ದ ಹೆಡ್ ಕಾನ್‌ಸ್ಟೆಬಲ್​ ಅಮಾನತು