ಕ್ರೈಂ

ಕುಕ್ಕರ್ ಸ್ಪೋಟ, ಸ್ವಲ್ಪದರಲ್ಲೇ ಗೃಹಿಣಿ ಪ್ರಾಣಾಪಾಯದಿಂದ ಪಾರು

347
Spread the love

ಕಳಂಜ: ಇಲ್ಲಿನ ಕಿಲಂಗೋಡಿಯ ವಾಸುದೇವ ಆಚಾರ್ಯರ ಮನೆಯಲ್ಲಿ ಕುಕ್ಕರ್ ಸ್ಪೋಟಗೊಂಡು ಗೃಹಿಣಿ ಅಪಾಯದಿಂದ ಪಾರಾದ ಘಟನೆ ಫೆ. 17ರಂದು ನಡೆದಿದೆ.

ಫೆ. 17ರಂದು ವಾಸುದೇವ ಆಚಾರ್ಯರ ಪತ್ನಿ ಶ್ರೀಮತಿ ಸುಮಾ ವಿ. ಆಚಾರ್ಯರು ಬೆಳಗ್ಗಿನ ಉಪಹಾರಕ್ಕೆ ಕುಕ್ಕರ್ ನಲ್ಲಿ ಪಲವು ಇಟ್ಟಿದ್ದರು. ಕುಕ್ಕರ್ ನಲ್ಲಿ ಒಂದು ವಿಷಲ್ ಆಗುವಷ್ಟು ಹೊತ್ತಿಗೆ ಹೊರಗಿನಿಂದ ಯಾರೋ ಕರೆದ ಧ್ವನಿ ಕೇಳಿಸಿ ಹೊರಗೆ ಬಂದರೆನ್ನಲಾಗಿದೆ. ಈ ಹೊತ್ತಿನಲ್ಲಿ ಕುಕ್ಕರ್ ಸ್ಪೋಟಗೊಂಡು ಮೇಲ್ಛಾವಣಿಗೆ ತಾಗಿ ಹಾನಿಯಾಗಿರುವುದಲ್ಲದೆ ಅದರ ಒಳಗಿದ್ದ ಆಹಾರ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಅದರ ವಿಷಲ್ ಬರುವ ಭಾಗ ಸುಮಾರು 10 ಮೀಟರ್ ದೂರಕ್ಕೆ ಚಿಮ್ಮಿದ್ದು ಅದೃಷ್ಟವಷಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

See also  ಬುಡಕಟ್ಟು ಮಹಿಳೆಯರನ್ನು ಮರಕ್ಕೆ ಕಟ್ಟಿ ಹಲ್ಲೆ..! ಗ್ರಾಮಸ್ಥರನ್ನು ಮತಾಂತರಕ್ಕೆ ಮನವೊಲಿಸಲು ಹೋಗುತ್ತಿದ್ದರು ಎಂದು ಆರೋಪ..!
  Ad Widget   Ad Widget   Ad Widget   Ad Widget   Ad Widget   Ad Widget